ಫೋಟೋಶೂಟ್ ವೇಳೆ ಎಡವಟ್ಟು : ಬಾಯಿಗೆ ಬಾಯಿ ಕೊಟ್ಟು ಮಾಡಿದ್ರು ಆ ಕೆಲಸ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ಗಳು ಕೆಲ ವರ್ಷಗಳಿಂದ ಭಾರಿ ಟ್ರೆಂಡ್‌ ಆಗಿವೆ. ಮದುವೆಯ ದಿನಗಿಂತಲೂ ಹೆಚ್ಚಾಗಿ ಮದುವೆಯ ಮುನ್ನ ಜೋಡಿಗಳು ಫೋಟೋ ಹೊಡೆಸಿಕೊಳ್ಳುವುದು. ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಳ್ಳುವುದು ಇದೀಗ ಮಾಮೂಲಾಗಿ ಬಿಟ್ಟಿದೆ.

ಈ ರೀತಿ ಫೋಟೋಶೂಟ್‌ ಮಾಡಿಸಿಕೊಳ್ಳುವಾಗ ಅದೆಷ್ಟೋ ಎಡವಟ್ಟುಗಳು ನಡೆಯುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ನವ ಜೋಡಿಯೊಂದು ಫೋಟೋಶೂಟ್​ ಮಾಡುವಾಗ ಧೂಮಪಾನಕ್ಕೆ ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ.?
ವಧು ಮತ್ತು ವರ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ವರ ಧೂಮಪಾನ ಮಾಡಿ ವಧುವಿನ ಬಾಯಿಗೆ ಬಾಯಿ ಹಾಕಿ ಹೊಗೆಯನ್ನು ಬಾಯಿಯೊಳಗೆ ಬಿಡುತ್ತಾನೆ. ವಧು ಆ ಹೊಗೆಯನ್ನು ಎಳೆದುಕೊಂಡು ಬಾಯಿಯಿಂದ ಹೊರಗೆ ಬಿಡುತ್ತಾಳೆ. ಬಳಿಕ ಇಬ್ಬರು ಕ್ಯಾಮೆರಾಗೆ ನಗುತ್ತಾ ಪೋಸ್​ ಕೊಡ್ತಾರೆ.

ಈ ವಿಡಿಯೋವನ್ನು ರಾಜೇಶ್ವರಿ ಅಯ್ಯರ್​ (@RajeswariAiyer) ಎಂಬುವರು ತಮ್ಮ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದು ಇಂದಿನ ಯುಗ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಲಿ? ಇಂತಹದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು? ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟ? ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಮೂಲ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ. ಆದರೆ, ವಿಡಿಯೋ ಮಾತ್ರ ನೆಟ್ಟಿಗರ ಗಮನ ಸೆಳೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಬಾರದು ಎಂದು ನವಜೋಡಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)