ಕದ್ದು ಮುಚ್ಚಿ ಪ್ರಿಯತಮೆಯನ್ನು ಕಾಣಲು ಹೋದ ಪ್ರಿಯತಮ : ಸಿಕ್ಕಿಬಿದ್ದಾಗ ಒಳ ಉಡುಪಿನಲ್ಲೇ ಕೆಳಗೆ ಜಂಪ್ ; ಮುಂದೇನಾಯ್ತು ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಪ್ರಿಯಕರ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋದ ಸಮಯದಲ್ಲೇ ಆಕೆಯ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪ್ರಿಯತಮ ತಕ್ಷಣ ಒಳ ಉಡುಪಿನಲ್ಲೇ ಬಾಲ್ಕನಿಯಿಂದ ಬಟ್ಟೆಯನ್ನು ನೇತಾಡಿಸಿಕೊಂಡು ಇಳಿಯಲು ಪ್ರಯತ್ನ ಪಡುತ್ತಾನೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸಕ್ಕತ್ ವೈರಲ್ ಆಗಿದೆ.

ಪ್ರಿಯತಮ ಕೇವಲ ಒಳ ಉಡುಪಿನಲ್ಲೇ ಇಳಿಯುತ್ತಿದ್ದರೆ, ಇತ್ತ ವಿಡಿಯೋ ಮಾಡುತ್ತಿದ್ದವರು ಜೋರಾಗಿ ನಗುತ್ತಿದ್ದಾರೆ. ಆ ಯುವಕನನ್ನು ಪ್ರಿಯತಮೆಯ ಮನೆಯವರು ಹಿಡಿಯಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.

ಪ್ರಿಯತಮ ಮೂರನೇ ಮಹಡಿಯಿಂದ ಕಟ್ಟಿದ ಬಟ್ಟೆಯ ಮೂಲಕ ನೇತಾಡುತ್ತ ಕೆಳಗೆ ಇಳಿಯುತ್ತಾನೆ. ಆಗ ಪ್ರಿಯತಮೆ ಸಹಾಯ ಮಾಡಲು ಆತನ ಬಟ್ಟೆಗಳನ್ನು ಕೆಳಗೆ ಎಸೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ರೀತಿ ಕದ್ದು ಮುಚ್ಚಿ ಪ್ರಿಯತಮೆಯನ್ನು ಕಾಣಲು ಹೋದ ಪ್ರಿಯತಮ ಸಿಕ್ಕಿಬಿದ್ದ ವಿಡಿಯೋ ಐದು ಮಿಲಿಯನ್ ವೀಕ್ಷಣೆ ಪಡೆದಿದೆ.