ನಿರ್ಜನ ಪ್ರದೇಶದಲ್ಲಿ ನಾಲ್ಕೈದು ಯುವಕರ ಜೊತೆ ಸಿಕ್ಕಿಬಿದ್ದ ಯುವತಿ ; ಮುಂದಾಗಿದ್ದೇನು.?

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಗೆಳೆಯರೊಂದಿಗೆ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬಳು ಏಕಾಂಗಿಯಾಗಿದ್ದ ವೇಳೆ ಸ್ಥಳೀಯರು ವಿಡಿಯೋ ರೆಕಾರ್ಡ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಯುವತಿಯು ಕನ್ಯಾಕುಮಾರಿಯ ಮೀನುಗಾರರ ಗ್ರಾಮ ಚಿನ್ನತೂರ ಮೂಲದವಳು ಎಂದು ಗುರುತಿಸಲಾಗಿದೆ. ಜನವಸತಿಯೇ ಇಲ್ಲದ ಅಥವಾ ಜನರೇ ಸುಳಿದಾಡದ ಇಡಪಾದ್ ಎಂಬ ಹೆಸರಿನ ಕರಾವಳಿ ಪ್ರದೇಶಕ್ಕೆ ತನ್ನ ಗೆಳೆಯರ ಜತೆ ಯುವತಿ ಒಬ್ಬಳೇ ತೆರಳಿದ್ದಳು.

ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಆ ಸಮಯದಲ್ಲಿ ಯುವತಿ ಸೇರಿದಂತೆ ಆಕೆಯ ಜತೆ ಬಂದಿದ್ದ ಯುವಕರೆಲ್ಲರು ಗಾಂಜಾ ಮತ್ತಿನಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಅದಕ್ಕೆ ಪೂರಕವಾದ ಅನೇಕ ಆಘಾತಕಾರಿ ವಸ್ತುಗಳು ಸಹ ಸ್ಥಳದಲ್ಲಿ ದೊರೆತಿವೆ ಎಂದು ವರದಿಯಾಗಿದೆ.

ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದು, ಸಾಕಷ್ಟು ಯುವಕರ ನಡುವೆ ಯುವತಿ ಒಬ್ಬಳೇ ಇರುವುದನ್ನು ಆ ಸ್ಥಳಕ್ಕೆ ಹೋದ ಜನರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾರೆ.

ವೈರಲ್​ ವಿಡಿಯೋದಲ್ಲಿ ಯುವತಿ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಭಯದಲ್ಲಿ ಗಾಬರಿಯಿಂದ ಓಡಾಡಿ ಕೂಗಾಡಿದ್ದಾಳೆ. ಈ ವೇಳೆ ಆಕೆಯೊಂದಿಗೆ ಬಂದಿದ್ದ ಯುವಕರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಸಿದರು.

ಇಂಥದ್ದೊಂದು ಬೆಳವಣಿಗೆ ಸ್ಥಳೀಯ ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಯುವತಿಯೊಬ್ಬಳು ನಾಲ್ಕೈದು ಯುವಕರ ಜತೆ ನಿರ್ಜನ ಪ್ರದೇಶದಲ್ಲಿ ಇರುವುದೆಂದರೆ ನಿಜಕ್ಕೂ ಇದು ಚಿಂತಿಸಬೇಕಾದ ಸಂಗತಿ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಲ್ಲದೆ, ತಮಿಳುನಾಡು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.