ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೊಬ್ಬಳು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಕಳ್ಳನೊಬ್ಬ ಆಕೆಯ ಬ್ಯಾಗ್ ಕದ್ದಿದ್ದಾನೆ. ಇನ್ನೇನು ಬೈಕ್ ನಲ್ಲಿ ಎಸ್ಕೇಪ್ ಆಗಬೇಕು ಎನ್ನುವಷ್ಟರಲ್ಲಿ ಎದುರಿನಿಂದ ಕಾರೊಂದು ಬಂದು ಆತನಿಗೆ ಗುದ್ದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಾರು ಒಂದಲ್ಲ ಎರಡಲ್ಲ ನಾಲ್ಕೈದು ಬಾರಿ ಕಳ್ಳನಿಗೆ ಗುದ್ದಿದೆ. ಅಂತೂ ಆ ಕಳ್ಳನಿಗೆ ತಕ್ಕ ಶಾಸ್ತಿ ಮಾಡುವಲ್ಲಿ ಕಾರಿನೊಳಗಿನ ವ್ಯಕ್ತಿ ಯಶಸ್ವಿಯಾಗಿದ್ಧಾನೆ. ಇತ್ತ ಮಹಿಳೆ ತನ್ನ ಬ್ಯಾಗ್ ಎತ್ತಿಕೊಂಡು ಹೊರಟಿದ್ದಾಳೆ.
ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಸಿನಿಮೀಯ ರೀತಿಯಲ್ಲಿ ನಡೆದ ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಇನ್ನು ಈ ವಿಡಿಯೋಗೆ ಕಮೆಂಟ್’ಗಳ ಸುರಿಮಳೆಯಾಗಿದೆ. ಕಾರು ಓಡಿಸುತ್ತಿರುವ ಅಣ್ಣನಿಗೆ ಪ್ರಣಾಮಗಳು. ಕಾರಿನ ಅಣ್ಣನಂಥವರು ಎಲ್ಲೆಡೆಯೂ ಬೇಕು. ಅಣ್ಣಾ ನೀವು ಗ್ರೇಟ್ ನಿಮಗೆ ನಮಸ್ಕಾರಗಳು ಎಂದು ಕೆಲವರು ಕಮೆಂಟ್ ಮಾಡಿದರೆ, ಕಳ್ಳನಿಗೆ ಬುದ್ಧಿ ಕಲಿಸಿದವರು ಪೊಲೀಸರೇ ಇರಬೇಕು. ಇಂಥ ಜನರಿದ್ದರೆ ಜಗತ್ತಿನಲ್ಲಿ ಅಪರಾಧಗಳೇ ಇರುವುದಿಲ್ಲ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. 7 ಲಕ್ಷಕ್ಕೂ ಅಧಿಕ ಜನರು ನೋಡಿರುವ ಈ ವಿಡಿಯೋದಡಿ ಸಹಸ್ರಾರು ಜನರು ಪ್ರತಿಕ್ರಿಯಿಸಿದ್ಧಾರೆ.
View this post on Instagram