ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಬೈಕ್ನಲ್ಲಿ ಬಂದು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು : ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಬಿಜೆಪಿ ಮುಖಂಡ ಅನುಜ್ ಚೌಧರಿ (34) ಎಂಬಯವವರೆ ಕೊಲೆಯಾದ ಬಿಜೆಪಿ ನಾಯಕ. ನಗರದ ಮಜೋಲಾ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಿಜೆಪಿ ಮುಖಂಡ ಅನುಜ್ ಚೌಧರಿ (34) ತನ್ನ ಸಹೋದರನೊಂದಿಗೆ ಉದ್ಯಾನವನಕ್ಕೆ ವಾಕ್ ಮಾಡಲು ಹೊರಟಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಆರೋಪಿಗಳು ಚೌಧರಿ ಮೇಲೆ ಗುಂಡು ಹಾರಿಸಿದ್ದು, ಚಿಕಿತ್ಸೆಗಾಗಿ ಬ್ರೈಟ್‌ಸ್ಟಾರ್ ಆಸ್ಪತ್ರೆಗೆ ತಲುಪುವ ಮೊದಲು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಹಾಗೂ ಕುಟುಂಬದವರ ಹೇಳಿಕೆ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.