ಸರಕಾರಿ ಪ್ರೌಢಶಾಲೆಯಲ್ಲಿ “ವಾಮಾಚಾರ” : ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಶಿಕ್ಷಕರು.!

ಜನಸ್ಪಂದನ ನ್ಯೂಸ್, ಯಾದಗಿರಿ : ಸರ್ಕಾರಿ ಪ್ರೌಢಶಾಲೆಯ ಎದುರೇ ವಾಮಾಚಾರ ಮಾಡಲಾಗಿದ್ದು, ಇದನ್ನು ಕಂಡು ಶಿಕ್ಷಕರು, ವಿದ್ಯಾರ್ಥಿಗಳು ಬೆಚ್ಟಿಬಿದ್ದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಬಸವಂತಪುರ ಸರ್ಕಾರಿ ಪ್ರೌಢಶಾಲೆಯ ಮುಂದೆಯೇ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಸವಂತಪುರ ಸರ್ಕಾರಿ ಪ್ರೌಢ ಶಾಲೆಯ ಮುಂದೆ ತೆಂಗಿನಕಾಯಿ, ಕುಂಕುಮ ಇಟ್ಟು, ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ.

ಇಂದು ಎಂದಿನಂತೆ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳು, ಶಿಕ್ಷಕರು ತೆರಳಿದಾಗ, ಬಸವಂತಪುರ ಸರ್ಕಾರಿ ಪ್ರೌಢಶಾಲೆ ಮುಂದೆ ವಾಮಾಚಾರ ಮಾಡಿರುವಂತ ವಿಷಯ ಬೆಳಕಿಗೆ ಬಂದಿದೆ.

ಶಾಲೆಯ ಮುಂದೆಯಷ್ಟೆಯಲ್ಲ, ಪ್ರೌಢ ಶಾಲೆಯ ಪ್ರತಿ ಕೊಠಡಿಯಲ್ಲಿಯೂ ಮಾಟಮಂತ್ರ ಮಾಡಲಾಗಿದೆ.

ಹೀಗೆ ವಾಮಾಚಾರ ಮಾಡಿರುವುದನ್ನು ಕಂಡ ಊರಿನ ಗ್ರಾಮಸ್ಥರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.