ಮಹಿಳೆಯನ್ನು ನಡುರಸ್ತೆಯಲ್ಲಿ ವಿವಸ್ತ್ರ ಮಾಡಿದ ವ್ಯಕ್ತಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ನಗ್ನಗೊಳಿಸಿ ಕಿರುಕುಳ ನೀಡಿದ ನಾಚಿಕೆಗೇಡಿನ ಘಟನೆಯೊಂದು ಹೈದರಾಬಾದ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬಾಲಾಜಿ ನಗರ ಬಸ್ ನಿಲ್ದಾಣದ ಸಮೀಪ ಭಾನುವಾರ ರಾತ್ರಿ 8.30ರ ಸುಮಾರಿಗೆ ಪೆದ್ದಮಾರಯ್ಯ ಎಂಬಾತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಕುಡಿದ ನಶೆಯಲ್ಲಿದ್ದ ವ್ಯಕ್ತಿ, ಮಹಿಳೆಯನ್ನು ಹಿಡಿದು ಎಳೆದು ಹಲ್ಲೆ ನಡೆಸಿದ್ದಾನೆ. ಅಲ್ಲದೇ ಸಾರ್ವಜನಿಕವಾಗಿ ಆಕೆಯ ಬಟ್ಟೆ ಹರಿದು ಎಸೆದಿದ್ದಾನೆ.

ಪೆದ್ದಮಾರಯ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಈ ವೇಳೆ ತನ್ನ ರಕ್ಷಣೆಗಾಗಿ ಮಹಿಳೆ ಆತನನ್ನು ತಳ್ಳಿ ಓಡಿಹೋಗಿದ್ದಾರೆ. ಇದರಿಂದ ಉದ್ರಿಕ್ತನಾದ ಪೆದ್ದಮಾರಯ್ಯ ಆಕೆಯ ಬಟ್ಟೆಗಳನ್ನ ಹರಿದು ಹಾಕಿದ್ದಾನೆ.

ಈ ವೇಳೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಆತನನ್ನು ಪ್ರಶ್ನಿಸಲು ಮುಂದಾಗಿದ್ದೂ ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ.

ಸಂತ್ರಸ್ತೆ ಸುಮಾರು 15 ನಿಮಿಷಗಳ ಕಾಲ ವಿವಸ್ತ್ರವಾಗಿ ರಸ್ತೆಯಲ್ಲೇ ನಿಂತಿದ್ದರು. ನಂತರ ಸ್ಥಳೀಯರು ಪೊಲೀಸರಿಗೆ ಬಟ್ಟೆ ತಂದುಕೊಡುವಂತೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಘಟನೆ ನಡೆದ ವೇಳೆ ಕೆಲವು ದಾರಿಹೋಕರು ಮಹಿಳೆಯನ್ನು ರಕ್ಷಿಸುವ ಬದಲು ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿದ್ದರು ಎಂದು ವರದಿಯಿಂದ ತಿಳಿದುಬಂದಿದೆ.