ಜನಸ್ಪಂದನ ನ್ಯೂಸ್, ಬಳ್ಳಾರಿ : ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಸೆಲೂನ್’ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಕೌಲ್ ಬಜಾರ್ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ 7 ಮಹಿಳೆಯರನ್ನು ರಕ್ಷಿಸಿ, 8 ಪುರುಷರನ್ನು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಪ್ರೊಬೇಷನರಿ ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ಕೌಲ್ ಬಜಾರ್ ಪೊಲೀಸರು ದಾಳಿ ಮಾಡಿದ್ದಾರೆ.
ನಾಗಲ್ಯಾಂಡ್, ದೆಹಲಿ, ವೆಸ್ಟ್ ಬೆಂಗಾಲ್ ಮತ್ತು ಓಡಿಸ್ಸಾ ಮೂಲದ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ವ್ಯವಸ್ಥಾಪಕ ಪ್ರಭುಗೌಡ ಸೇರಿದಂತೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.