ಬಡವರ ಬಾದಾಮಿ ಕಡಲೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬಡವರ ಬಾದಾಮಿ ಕಡಲೆ ಕಾಯಿಯನ್ನು (ಶೇಂಗಾ) ಒಮ್ಮೆ ತಿನ್ನಲು ಶುರು ಮಾಡಿದರೆ ಕಡ್ಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಕಡಲೆ ಕಾಯಿಯನ್ನು ಹೇಗೆ ತಿಂದರೂ ರುಚಿಯಾಗಿರುತ್ತದೆ. ಹಸಿಯಾಗಿ, ಬೇಯಿಸಿ, ಹುರಿದು, ಹೇಗೆ ತಿಂದರೂ ಈ ಬಡವರ ಬಾದಾಮಿ ಬಾಯಿಗೆ ರುಚಿ ನೀಡುವುದರಲ್ಲಿ ಸಂದೇಹವಿಲ್ಲ.

ಇನ್ನು ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್‌ರೂಟ್‌ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗ ಪಡೆಯಬಹುದು. ಹಾಗಾದರೆ ಕಡಲೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನು ಪ್ರಯೋಜನಗಳಿವೆ ತಿಳಿಯೋಣ ಬನ್ನಿ.

* ಹೃದಯ ಆರೋಗ್ಯಕರವಾಗಿರುತ್ತದೆ :            ಬೇಯಿಸಿದ ಕಡಲೆಕಾಯಿಯನ್ನು ಸೇವಿಸುವುದರಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಬೇಯಿಸಿದ ಕಡಲೆಕಾಳಿನಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚುತ್ತದೆ, ಇದು ಹೃದಯಕ್ಕೆ ತುಂಬಾ ಆರೋಗ್ಯಕರ. ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ಹೆಚ್ಚಿನ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.

* ರಕ್ತದ ಕೊರತೆ ನೀಗಿಸುತ್ತದೆ :
ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದರೆ, ನೀವು ಬೇಯಿಸಿದ ಕಡಲೆಕಾಯಿಯನ್ನು ತಿನ್ನಬೇಕು. ಇದು ರಕ್ತಹೀನತೆಯ ದೂರನ್ನು ತೆಗೆದುಹಾಕುತ್ತದೆ ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಸಾಕಷ್ಟು ಕಂಡುಬರುತ್ತದೆ. ಇದರಿಂದಾಗಿ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ.

* ಕ್ಯಾನ್ಸರ್ ತಡೆಯುತ್ತದೆ :
ಕಡಲೆಕಾಯಿ ಬೆಣ್ಣೆ / ಪೀನಟ್ ಬಟರ್ ತಿನ್ನುವುದು ಕೆಲವು ವಿಧದ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

* ಲಕ್ವ ಸಮಸ್ಯೆ :
ಕಡಲೆ ಕಾಯಿಯಲ್ಲಿನ ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಾಗಿಸಿ ಲಕ್ವ ಹೊಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

* ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ :         ಬೇಯಿಸಿದ ಕಡಲೆಯನ್ನು ಸೇವಿಸುವುದರಿಂದ ದೃಷ್ಟಿ ಹೆಚ್ಚುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಬಿ6 ಕಡಲೆಕಾಯಿಯಲ್ಲಿ ಕಂಡುಬರುತ್ತದೆ. ಬೆಳಿಗ್ಗೆ ಚಳಿಯಲ್ಲಿ ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ನಿಮ್ಮ ಕಣ್ಣುಗಳು ಆರೋಗ್ಯಕರವಾಗಿರುತ್ತದೆ.

* ಕೀಲು ನೋವಿಗೆ ಸಿಗಲಿದೆ ಪರಿಹಾರ :           ಬೇಯಿಸಿದ ಕಡಲೆಕಾಳನ್ನು ಬೆಲ್ಲದೊಂದಿಗೆ ತಿಂದರೆ ಕೀಲುನೋವು ನಿವಾರಣೆಯಾಗುತ್ತದೆ. ಬೆಲ್ಲ ಮತ್ತು ಕಡಲೆಯಲ್ಲಿ ಕ್ಯಾಲ್ಸಿಯಂ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಆದ್ದರಿಂದ ಕಡಲೆಯನ್ನು ಬೇಯಿಸಿ ತಿಂದರೆ ಕೀಲು, ಮೂಳೆ ನೋವಿನಿಂದ ಸಾಕಷ್ಟು ಉಪಶಮನವಾಗುತ್ತದೆ. ಸಂಧಿವಾತ ರೋಗಿಗಳೂ ಇದನ್ನು ಸೇವಿಸಬಹುದು.

* ತೂಕ ಕಡಿಮೆಯಾಗುತ್ತದೆ :
ನೀವು ಬೇಯಿಸಿದ ಕಡಲೆಕಾಯಿಯನ್ನು ಸೇವಿಸಿದರೆ, ನಿಮ್ಮ ತೂಕವೂ ಕಡಿಮೆಯಾಗುತ್ತದೆ ಏಕೆಂದರೆ ಬೇಯಿಸಿದ ಕಡಲೆಕಾಯಿಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ ಮತ್ತು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ, ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬು ಹೊರಬರುತ್ತದೆ. ಕರುಳನ್ನು ಸ್ವಚ್ಛಗೊಳಿಸಲು ಬೇಯಿಸಿದ ಕಡಲೆಕಾಯಿಯನ್ನು ಸಹ ತಿನ್ನಬೇಕು

* ಜೀವಿತಾವಧಿ ಹೆಚ್ಚಳ :
ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮರಣದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ.. ಅನಾರೋಗ್ಯದಿಂದ ಅಕಾಲಿಕವಾಗಿ ಮರಣ ಹೊಂದುವುದನ್ನು ತಪ್ಪಿಸಿ ನಮ್ಮ ದೇಹವನ್ನು ಆರೋಗ್ಯದಿಂದ ಇಟ್ಟುಕೊಳ್ಳಬೇಕು ಎಂದರೆ ನಿಯಮಿತವಾಗಿ ಕಡಲೇಕಾಯಿ ಸೇವನೆ ಮಾಡಲೇಬೇಕು.. ಹೌದು ನೆಲಗಡಲೆ ಸೇವನೆ ಮಾಡುವುದರಿಂದ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಸಂಶೋಧನೆ ಹೇಳಿದೆ..

* ಟೈಪ್ -2 ಮಧುಮೇಹ ಕಡಿಮೆ ಮಾಡುತ್ತದೆ :
ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಹೊಂದಿರುವ ಆಹಾರ ಆಗಿದೆ.. ಹೀಗಾಗಿ ಕಡಲೇಕಾಯಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವುದಿಲ್ಲ. ಅದರಲ್ಲೂ ಮಹಿಳೆಯರಲ್ಲಿ ಕಂಡುಬರುವ ಟೈಪ್ -2 ಮಧುಮೇಹ ನಿಯಂತ್ರಣ ಮಾಡಲು ಕಡಲೇಕಾಯಿ ಸಹಾಯಕಾರಿಯಾಗಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.