ಜನಸ್ಪಂದನ ನ್ಯೂಸ್, ಡೆಸ್ಕ್ : ಫುಟ್ಬಾಲ್ ಆಟಗಾರ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್ ನದಿಯಲ್ಲಿ ಮೊಸಳೆಯೊಂದು ದಾಳಿ ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನೂ ಕೋಸ್ಟರಿಕಾ ಕೋಸ್ಟರಿಕಾ ರಾಜಧಾನಿ ಸ್ಯಾನ್ ಜೋಸ್ ನಿಂದ 140 ಮೈಲಿ ದೂರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಜೀಸಸ್ ಆಲ್ಬರ್ಟೊ ಮೀನುಗಾರಿಕೆ ಸೇತುವೆಯ ಬಳಿ ವ್ಯಾಯಾಮ ಮಾಡುತ್ತಿದ್ದಾಗ ಆತನ ಮೇಲೆ ಮೊಸಳೆ ದಾಳಿ ಮಾಡಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಈ ಭಯಾನಕ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಸ್ಥಳದಿಂದ ಓಡಿಹೋದರು ಎನ್ನಲಾಗಿದೆ.
ದಾಳಿ ನಂತರ ಮೊಸಳೆ ಜೀಸಸ್ ಆಲ್ಬರ್ಟೋ ದೇಹವನ್ನು ಬಾಯಿಯಿಂದ ಕಚ್ಚಿಕೊಂಡು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಎಳೆದೊಯ್ಯುತ್ತಿರುವ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳೀಯರು ಮೊಸಳೆಗೆ ಗುಂಡಿಕ್ಕಿ ಕೊಂದು ನಂತರ ಜೀಸಸ್ ಆಲ್ಪರ್ಟೊ ದೇಹವನ್ನು ಹೊರಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.
https://twitter.com/tymon_10/status/1687659671895543808?ref_src=twsrc%5Etfw%7Ctwcamp%5Etweetembed%7Ctwterm%5E1687659671895543808%7Ctwgr%5E940c9fb67582bd0cba94588eb165544db0e49ea2%7Ctwcon%5Es1_c10&ref_url=https%3A%2F%2Fapi-news.dailyhunt.in%2F