ಕೈಯಲ್ಲಿ ಹಿಡಿದ ಸೈಕಲ್ ಟೈರ್‌ಗೂ ಟಿಕೆಟ್ ನೀಡಿದ ಕಂಡಕ್ಟರ್ ; ಪ್ರಯಾಣಿಕ ಕಂಗಾಲು.!

ಜನಸ್ಪಂದನ ನ್ಯೂಸ್, ಹಾವೇರಿ : ಪ್ರಯಾಣಿಕರೊಬ್ಬರ ಸೈಕಲ್ ಟಯರ್​ಗೆ ರಾಣೆಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ರಾಜ್ಯ ಸಾರಿಗೆ ಬಸ್​ನಲ್ಲಿ ನಿರ್ವಾಹಕನೋರ್ವ 5 ರೂಪಾಯಿ ಲಗೇಜ್ ಶುಲ್ಕ ಆಕರಿಸಿದ ಘಟನೆ ಬುಧವಾರ ನಡೆದಿದೆ.

ರಟ್ಟಹಳ್ಳಿ ತಾಲೂಕಿನ ತೋಟಗಂಟಿ ಗ್ರಾಮದ ಉಮೇಶ ಪಾಟೀಲ ಅವರು ಮಗನೊಂದಿಗೆ ರಾಣೆಬೆನ್ನೂರಿನಿಂದ ರಟ್ಟಿಹಳ್ಳಿ ಮಾರ್ಗವಾಗಿ ಶಿಕಾರಿಪುರಕ್ಕೆ ಹೊರಟಿದ್ದ (ಕೆಎ 42 ಎಫ್ 1237) ಬಸ್​ನಲ್ಲಿ ರಟ್ಟಿಹಳ್ಳಿಗೆ ಎರಡು ಟಿಕೆಟ್ ಪಡೆದಿದ್ದಾರೆ. ಓರ್ವ ಪ್ರಯಾಣಿಕನಿಗೆ 35 ರೂ. ಟಿಕೆಟ್ ದರವಿದ್ದು, ಇಬ್ಬರಿಂದ 70 ರೂ. ಆಗುತ್ತದೆ. ಆದರೆ ಕಂಡಕ್ಟರ್ 75 ರೂ. ಟಿಕೆಟ್ ನೀಡಿದ್ದಾರೆ.

ಆಗ ಪ್ರಯಾಣಿಕ ಯಾಕೆ 75 ರೂ. ಟಿಕೆಟ್ ನೀಡಿದ್ದಿರಿ ಎಂದಾಗ, ಲಗೇಜ್ ಸೀಟ್ ಟಿಕೆಟ್ 5 ರೂ. ಎಂದು ಕಂಡಕ್ಟರ್ ಉತ್ತರಿಸಿದ್ದಾರೆ.

ಕೈಯಲ್ಲಿ ಹಿಡಿದುಕೊಂಡಿದ್ದ ಸೈಕಲ್ ಟಯರ್​ಗೆ ಲಗೇಜ್ ಹಣ ನೀಡಬೇಕು ಎಂದು ಎಷ್ಟೆ ವಾದಿಸಿದರೂ ಬಗ್ಗದ ನಿರ್ವಾಹಕ ನಮಗೆ ಹೊಸ ಆದೇಶ ಬಂದಿದೆ. ಟಯರ್​ಗೆ ಲಗೇಜ್ ಹಣ ನೀಡಲೇಬೇಕು ಎಂದು ತಿಳಿಸಿದ್ದಾರೆ.

ಆದರೆ, ಇದಕ್ಕೆ ನಿರ್ವಾಹಕನ ಕ್ರಮಕ್ಕೆ ಸಹ ಪ್ರಯಾಣಿಕರು ಆಶ್ಚರ್ಯಗೊಂಡಿದ್ದು,  ಸೈಕಲ್ ಟೈರ್ ಲಗೇಜ್ ಹಣ ನೀಡುವಂತೆ ಪರಸ್ಥಿತಿ ಬಂದಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.