ಮಾಜಿ ಸೈನಿಕನಿಗೆ ಹನಿಟ್ರ್ಯಾಪ್‌ ; ಕಿರುತೆರೆ ನಟಿಯ ಬಂಧನ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಜಿ ಸೈನಿಕರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಅವರಿಂದ 11 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಕೇರಳದ ಕಿರುತೆರೆ ನಟಿ ಹಾಗೂ ಆಕೆಯ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಕಿರುತೆರೆ ನಟಿ ನಿತ್ಯಾ ಶಶಿ ಹಾಗೂ ಆಕೆಯ ಗೆಳೆಯ ಬಿನು ಎಂದು ವರದಿಯಾಗಿದೆ.

ಇವರಿಬ್ಬರೂ ತಮಗೆ ಪರಿಚಯವಾಗಿದ್ದ 75 ವರ್ಷದ ಮಾಜಿ ಯೋಧರ ಬೆತ್ತಲೆ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಹಣ ಸುಲಿಗೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಇನ್ನೂ ಯೋಧ ತಿರುವನಂತಪುರಂನಲ್ಲಿ ವಾಸವಾಗಿದ್ದು, ನಿವೃತ್ತರಾದ ಬಳಿಕ ಕೇರಳದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪರಿಚಯ ಮಾಡಿಕೊಂಡಿದ್ದ ನಿತ್ಯಾಶಶಿ ಸಲುಗೆ ಬೆಳೆಸಿಕೊಂಡಿದ್ದಳು.

ಒಮ್ಮೆ ಏಕಾಂತ ಸ್ಥಳಕ್ಕೆ ಇವರನ್ನು ಕರೆಸಿಕೊಂಡ ನಟಿ ಬೆತ್ತಲಾಗುವಂತೆ ಮಾಡಿದ್ದು, ಈ ವೇಳೆ ಮೊದಲೇ ಮಾತಾಡಿಕೊಂಡಿದ್ದಂತೆ ರೂಮ್ ಗೆ ನುಗ್ಗಿದ ಬಿನು ಇವರಿಬ್ಬರು ಸಲುಗೆಯಲ್ಲಿರುವ ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ನಿತ್ಯಾಶಶಿ ಹಾಗೂ ಬಿನು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದರು.

ವಿಡಿಯೋ ಹಾಗೂ ಫೋಟೋ ಬಹಿರಂಗವಾಗುವ ಭಯದಲ್ಲಿ ನಿವೃತ್ತ ಯೋಧ 11 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆದರೆ ಇವರಿಬ್ಬರ ಕಿರುಕುಳ ಮುಂದುವರೆದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಕಿರುತೆರೆ ನಟಿ ನಿತ್ಯಾಶಶಿ ಹಾಗೂ ಆಕೆಯ ಸ್ನೇಹಿತ ಬಿನುವನ್ನು ಬಂಧಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.