ಜನಸ್ಪಂದನ ನ್ಯೂಸ್, ಬೆಂಗಳೂರು : ಬನಶಂಕರಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ನಲ್ಲಿ, ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಯುವತಿ ಬಸ್ ಕಂಡಕ್ಟರ್ ಜೊತೆ ಜಗಳಕ್ಕಿಳಿದ ಘಟನೆ ನಡೆದಿದೆ.
ಯುವತಿ ನಾನು ಕೇಂದ್ರ ಸರ್ಕಾರದ ಉದ್ಯೋಗಿ ಎಂದು ಹೇಳಿಕೊಂಡಿದ್ದು, ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ಕಂಡಕ್ಟರ್ ಬಳಿ ಜಗಳವಾಡಿದ್ದಾಳೆ.
ನನ್ನ ಬಳಿ ಕೇಂದ್ರ ಸರ್ಕಾರದ ಐಡಿ ಕಾರ್ಡ್ ಇದೆ, ಏನ್ ಮಾಡ್ತಿಯೋ ಮಾಡ್ಕೊ ಎಂದು ದಬಾಯಿಸಿದ್ದಾಳೆ.
ಗುರುತಿನ ಚೀಟಿ ತೋರಿಸಿ ಎಂದರೂ ಈಕೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳನ್ನು ನಿಂದಿಸಿದ್ದಾಳೆ. ಮೊಬೈಲ್ಫೋನ್ ಮೂಲಕ ಆಧಾರ್ ಪ್ರೂಫ್ ತೋರಿಸಿದ್ದರೂ ಅದರಲ್ಲೂ ರಾಜ್ಯ ಯಾವುದೆಂದು ಇರಲಿಲ್ಲ.
ಟಿಕೆಟ್ ತೆಗೆದುಕೊಳ್ಳಿ ಎಂದರೆ ಮೊಬೈಲ್ಫೋನ್ನಲ್ಲಿ ವಿಡಿಯೋ ಮಾಡುತ್ತಿದ್ದ ಈ ಯುವತಿಗೆ, ಸೆಂಟ್ರಲ್ ಗವರ್ನಮೆಂಟ್ ಉದ್ಯೋಗಿ ಎನ್ನುವುದಕ್ಕೆ ಯಾವ ಪ್ರೂಫ್ ಇದೆ ಎಂದು ಸಹ ಪ್ರಯಾಣಿಕರು ಕೇಳಿದರು. ಆದರೆ ಅವರೊಂದಿಗೂ ಸಹ ಆಕೆ ಗಲಾಟೆ ಮಾಡಿದ್ದಾಳೆ.