ಧೂದಸಾಗರದಲ್ಲಿ ಭೂ ಕುಸಿತ : ರೈಲು ಸಂಚಾರ ತಾತ್ಕಾಲಿಕ ರದ್ದು..!

ಜನಸ್ಪಂದನ ನ್ಯೂಸ್, ಬೆಳಗಾವಿ : ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಧೂದಸಾಗರ ಜಲಪಾತದ ಬಳಿಯ ಸುರಂಗ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತಗೊಂಡಿದೆ.

ಇದರಿಂದಾಗಿ ಗೋವಾಕ್ಕೆ ತೆರಳುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಬೆಳಗಾವಿ ಮತ್ತು ಗೋವಾ ಮಾರ್ಗದಲ್ಲಿರುವ ಕ್ಯಾಸಲ್ ರಾಕ್ ಬಳಿ ಮಂಗಳವಾರ ರಾತ್ರಿ ಗುಡ್ಡ ಕುಸಿತಗೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿರುವುದರಿಂದ ಸಂಪರ್ಕ ಕಡಿತಗೊಂಡಿದೆ.

ಧೂದಸಾಗರ ಜಲಪಾತ ಬಳಿಯ ಮೂರನೇ ಸುರಂಗದಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಮಂಗಳವಾರ ರಾತ್ರಿ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲು ಮಾರ್ಗ ಬದಲಿಸಿ ಮುಂಬೈ ಮೂಲಕ ಕಳಿಸಲಾಗಿದೆ.

ದೆಹಲಿಯಿಂದ ಮೀರಜ್ ಮೂಲಕ ರವಿವಾರ ರಾತ್ರಿ ಗೋವಾಕ್ಕೆ ತೆರಳುತ್ತಿದ್ದ ರೈಲು ಬೆಳಗಾವಿವರೆಗೆ ಮಾತ್ರ ಬಂದಿದೆ.

ಅಲ್ಲಿಂದ ಪ್ರಯಾಣಿಕರನ್ನು ಬಸ್ ಮೂಲಕ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಗೋವಾಕ್ಕೆ ಕಳಿಸಲಾಗಿದೆ. ಸದ್ಯಕ್ಕೆ ರೈಲುಗಳು ಕ್ಯಾಸಲ್ ರಾಕ್ ವರೆಗೆ ಮಾತ್ರ ತೆರಳುತ್ತಿವೆ.