ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬದ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವನ್ನಪ್ಪಿದ ದುರ್ದೈವಿ ಯುವಕರನ್ನು ಹರೀಶ್(31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಇವರು ಗುಬ್ಬಿ ತಾಲ್ಲೂಕಿನ ಆಡುಗೊಂಡನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಗ್ರಾಮದ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮದ ಕೆರೆಗೂ ಕೂಡ ನೀರು ಹರಿದು ಬರುತ್ತಿದೆ. ಕೆರೆಗೆ ನೀರು ಬಂದ ಪರಿಣಾಮ ತಮ್ಮ ಸ್ನೇಹಿತರೊಂದಿಗೆ ಈ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು.
ಇಬ್ಬರು ಯುವಕರು ಮೀನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲ ಜಾರಿ ಕೆರೆಗೆ ಬಿದ್ದಿದ್ದಾರೆ. ಸುತ್ತಮುತ್ತಲಿದ್ದ ಯುವಕರು ಇವರನ್ನು ಪಾರು ಮಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ನಾಪತ್ತೆಯಾದ ಇಬ್ಬರು ಯುವಕರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದೆ.
ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.