ಮಳೆಗಾಲದಲ್ಲಿ ಆರೋಗ್ಯಕರ ಡಯೆಟ್‌ಗೆ ಇಲ್ಲಿದೆ ಬೆಸ್ಟ್‌ ಆಹಾರಗಳ ಪಟ್ಟಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಶೀತ, ನೆಗಡಿ, ಮಲೇರಿಯಾ, ಡೆಂಗಿ, ಟೈಫಾಯಿಡ್‌ನಂತಹ ಸಮಸ್ಯೆಗಳು ಮಳೆಗಾಲದಲ್ಲಿ ಸಹಜ.

ಈ ಋತುಮಾನದಲ್ಲಿ ಬೇಯಿಸಿದ ತಾಜಾ ಆಹಾರ, ಸಮತೋಲಿತ ಆಹಾರ ಹಾಗೂ ಸರಳವಾಗಿ ಜೀರ್ಣವಾಗಲು ನೆರವಾಗುವ ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ನಿಮ್ಮ ಆಹಾರದಲ್ಲಿ ಮಳೆಗಾಲದಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇರಿಸಬೇಕು. ಹಾಗಾದರೆ ಮಳೆಗಾಲದಲ್ಲಿ ಆರೋಗ್ಯ ಹಾಗೂ ಡಯೆಟ್‌ ಹಿನ್ನೆಲೆಯಲ್ಲಿ ಯಾವೆಲ್ಲ ಅಹಾರಗಳು ಸೇವಿಸಬಹುದು ಅಂತ ತಿಳಿಯಿರಿ.

ಮಸಾಲೆ ಪದಾರ್ಥಗಳು :
ಅರಿಸಿನ ಮತ್ತು ಶುಂಠಿ ನಂಜುನಿರೋಧಕಗಳು. ಇವು ಉರಿಯೂತ ವಿರೋಧ ಅಂಶಗಳನ್ನೂ ಹೊಂದಿವೆ. ಆಂಟಿ ಆಕ್ಸಿಡೆಂಟ್‌ ಅಂಶಗಳು ಇದರಲ್ಲಿ ಸಮೃದ್ಧವಾಗಿದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು.

ಹಣ್ಣುಗಳು :
ಮಳೆಗಾಲದಲ್ಲಿ ಹೆಚ್ಚು ಸಿಗುವ ಪೀಚ್‌ ಹಣ್ಣುಗಳು, ನೇರಳೆ, ಪಿಯರ್ಸ್‌, ಫ್ಲಮ್‌, ಚೆರ್ರಿ, ಲೀಚಿ ಹಾಗೂ ದಾಳಿಂಬೆ ಹಣ್ಣುಗಳು ನಿಮ್ಮ ಡಯೆಟ್‌ನಲ್ಲಿ ಇರಬೇಕು. ಮಳೆಗಾಲದಲ್ಲಿ ಸಿಗುವ ಈ ಹಣ್ಣುಗಳಲ್ಲಿ ವಿಟಮಿನ್‌ ಎ, ಸಿ, ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್‌ ಅಂಶಗಳಿಂದ ಸಮೃದ್ಧವಾಗಿರುತ್ತವೆ.

ಪಾನೀಯಗಳು :
ಮಳೆಗಾಲದಲ್ಲಿ ಸಾಕಷ್ಟು ಬಿಸಿನೀರು ಕುಡಿಯಬೇಕು. ಇದರೊಂದಿಗೆ ತಾಜಾ ಸೂಪ್‌ಗಳನ್ನು ಹೆಚ್ಚು ಹೆಚ್ಚು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೇ ಮಳೆಗಾಲದಲ್ಲಿ ಸೂಪ್‌ ಕುಡಿಯವುದನ್ನು ಮರೆಯಬಾರದು ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ತರಕಾರಿಗಳು :
ಮಳೆಗಾಲದ ವಾತಾವರಣಕ್ಕೆ ಹಗಲಕಾಯಿ, ಸೋರೆಕಾಯಿ, ಹೀರೆಕಾಯಿ, ಕುಂಬಳಕಾಯಿಯಂತಹ ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಇವು ಮಳೆಗಾಲದ ಡಯೆಟ್‌ಗೆ ಹೇಳಿ ಮಾಡಿಸಿದಂತಹವು.

ಮಳೆಗಾಲದಲ್ಲಿ ಆರೋಗ್ಯಕರ ಡಯೆಟ್‌ಗೆ ಟಿಪ್ಸ್‌ :

* ಶುದ್ಧ ನೀರು ಕುಡಿಯಲು ಆಧ್ಯತೆ ನೀಡಿ.

* ಮಳೆಗಾಲದಲ್ಲಿ ಮಾಂಸಾಹಾರದ ಸೇವನೆಗೆ ಕಡಿವಾಣ ಹಾಕಿ.

* ಉಪ್ಪಿನಾಂಶ ಕಡಿಮೆ ಸೇವಿಸಿ : ಮಳೆಗಾಲದಲ್ಲಿ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೆಚ್ಚಿಸಲು ಉಪ್ಪಿನಾಂಶವನ್ನು ಕಡಿಮೆ ಸೇವಿಸಬೇಕು. ಮಳೆಗಾಲದಲ್ಲಿ ಹೆಚ್ಚಿದ ಉಪ್ಪಿನಾಂಶ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಉಪ್ಪಿನಾಂಶ ಸೇವಿಸಿ.

* ಗಿಡಮೂಲಿಕೆಯೊಂದಿಗೆ ಶುಂಠಿ, ತುಳಸಿ, ದಾಲ್ಚಿನ್ನಿ, ಮೆಣಸು, ಏಲಕ್ಕಿ ಮತ್ತು ಲವಂಗ ಸೇರಿಸಿದ ನೀರು ಅಥವಾ ಕಷಾಯ ಕುಡಿಯಿರಿ. ಇದು ರೋಗನಿರೋಧಕ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.

* ಮಜ್ಜಿಗೆ, ಲಸ್ಸಿ, ಕಲ್ಲಂಗಡಿ ಮುಂತಾದ ದೇಹದ ಉಷ್ಣತೆಯನ್ನು ತಗ್ಗಿಸುವ ಆಹಾರ ಮತ್ತು ಪಾನೀಯಗಳು ದೇಹದಲ್ಲಿ ಊತದ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಅಂತಹ ಆಹಾರವನ್ನು ತಪ್ಪಿಸುವುದು ಉತ್ತಮ.

* ಮಳೆಗಾಲದಲ್ಲಿ ಆಹಾರಗಳಿಗೆ ಹೆಚ್ಚು ಹೆಚ್ಚು ಬೆಳ್ಳುಳ್ಳಿಯನ್ನು ಸೇರಿಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Janaspandhan News, Desk : Problems like cold, common cold, malaria, dengue, typhoid are normal in rainy season.

During this season, more attention should be paid to eating fresh cooked food, balanced food and easy to digest food. You should include more fruits and vegetables in your diet. So, know what foods can be consumed during the rainy season in terms of health and diet.

Spices :
Turmeric and ginger are antiseptic. They also have anti-inflammatory properties. It is rich in antioxidant elements. These should be included in your diet.

Fruits :
Peaches, violets, pears, plums, cherries, lychees and pomegranates, which are abundant in the rainy season, should be in your diet. These fruits, which are available in the rainy season, are rich in vitamins A, C, fiber and antioxidants.

Drinks :
Drink plenty of hot water during rainy season. Along with this fresh soups should be drunk more and more. It not only prevents the body from dehydration problem but also helps to boost immunity. Also don’t forget to drink soup during rainy season as it improves digestion.

Vegetables :
During the rainy season, more emphasis should be placed on the consumption of vegetables like melons, gourds, yams and pumpkins. These are tailor-made for monsoon diet.

Tips for healthy diet in rainy season :
* Make it a priority to drink clean water.

* Cut down on meat consumption during rainy season.

* Consume less salt : In rainy season, one should consume less salt to control and increase blood pressure in the body. Increased salt content during rainy season can cause many health problems. So consume as little salt as possible.

* Drink herbal water or decoction with ginger, basil, cinnamon, pepper, cardamom and cloves. It helps in boosting the immunity level.

* Foods and drinks that lower the body temperature like buttermilk, lassi, watermelon etc increase the risk of swelling in the body and it is best to avoid such foods.

* More and more garlic should be added to foods during rainy season. It helps in improving immunity.

Disclaimer : This article is based on reports and information available on the internet. Janaspandhan News is not affiliated with and not responsible for this.