ಬೆಳಗಾವಿ : ಲಂಚ ಪಡೆಯುತ್ತಿದ್ದ ವೇಳೆ ಉಪ ತಹಶಿಲ್ದಾರ, ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಜಿಲ್ಲೆಯ ನಿಪ್ಪಾಣಿಯಲ್ಲಿ 5 ಸಾವಿರ ಲಂಚದ ಹಣ ಪಡೆಯುವಾಗ ಉಪ ತಹಶಿಲ್ದಾರ ಹಾಗೂ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಇಂದು (ಜು.19) ನಡೆದಿದೆ.

ನಿಪ್ಪಾಣಿ ಉಪ ತಹಶಿಲ್ದಾರ ಅಭಿಜೀತ್ ಬೋಂಗಾಳೆ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪಾರೀಸ ಸತ್ತಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇವರಿಬ್ಬರು ತಲಾ 5 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ತಂಡವು ದಾಳಿ ನಡೆಸಿದೆ.

ಇವರಿಬ್ಬರು ಆಸ್ತಿಯ ಹೆಸರು ಬದಲಾವಣೆ ಮಾಡಲು ನಿಪ್ಪಾಣಿಯ ರಾಜಕುಮಾರ ತುಕಾರಾಮ್ ಶಿಂಧೆ ಎಂಬುವವರಿಂದ 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ರಾಜಕುಮಾರ ಶಿಂಧೆ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.