Saturday, July 13, 2024
spot_img
spot_img
spot_img
spot_img
spot_img
spot_img

ಒಂದೇ ಬೈಕ್‌ನಲ್ಲಿ 15 ಮಕ್ಕಳ ಜೊತೆ ಜಾಲಿ ರೈಡ್ ; ವಿಡಿಯೋ ನೋಡಿ ನೆಟ್ಟಿಗರು ಗಾಬರಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣದಲ್ಲಿ ದಿನಂಪ್ರತಿ ಚಿತ್ರ ವಿಚಿತ್ರ ವಿಡಿಯೋಗಳು ಶೇರ್‌ ಆಗುತ್ತಲೇ ಇರುತ್ತವೆ. ಅವುಗಳು ಕೆಲವು ಪ್ರಾಣಿ ಪಕ್ಷಿಗಳದ್ದಾರಿದ್ದರೆ, ಇನ್ನು ಕೆಲವು ಹುಚ್ಚಾಟದ ರೀಲ್ಸ್‌ದವುಗಳಾಗಿರುತ್ತವೆ. ಇನ್ನು ಕೆಲವು ಮೈ ಜುಮ್ಮ್ ಎನ್ನುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ಇದೀಗ ಇಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಚಲಾಯಿಸುತ್ತಿರುವ ವಿಡಿಯೋ ಇದಾಗಿದೆ. ಇದರಲ್ಲಿ ವಿಶೇಷ ಅಚ್ಚರಿಯ ಸಂಗತಿ ಏನು ಅನ್ನುತ್ತೀರಾ.?

ಇದನ್ನೂ ಓದಿ : ಚಲಿಸುತ್ತಿರುವ ಶಾಲಾ ವ್ಯಾನ್‌ನಿಂದ ಹೊರಬಿದ್ದ ಇಬ್ಬರು ಬಾಲಕಿಯರು ; ಮೈ ಜುಮ್ಮ್‌ ಎನ್ನುವ ವಿಡಿಯೋ Viral.! 

ಇದರಲ್ಲಿ ಅಚ್ಚರಿಯ ಸಂಗತಿ ಏನೆಂದರೆ, ಆ ವ್ಯಕ್ತಿ ಬೈಕ್‌ನಲ್ಲಿ ಒಬ್ಬನೇ ಕುಳಿತಿಲ್ಲ, ಬದಲಾಗಿ ಹದಿನೈದಕ್ಕೂ ಹೆಚ್ಚು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡ ಜಾಲಿ ರೈಡ್ ಹೋಗುತ್ತಿದ್ದಾನೆ.

ಈ ವೈರಲ್ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಆತಂಕ ಮತ್ತು ಗಾಬರಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಬೈಕ್ ನಲ್ಲಿ ಸ್ಟಂಟ್ ಮಾಡುವ ಕ್ರೇಜ್ ವಿಪರೀತವಾಗಿದೆ. ಎಷ್ಟೋ ಯುವಕರು ಈ ಮೂಲಕ ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆ.

ಹೌದು, ಸಾಮಾನ್ಯವಾಗಿ ಒಂದು ಬೈಕ್ ನಲ್ಲಿ ಇಬ್ಬರಿಗೆ ಮಾತ್ರ ಓಡಾಡಲು ಅವಕಾಶವಿದೆ. ಅಪ್ಪಿ ತಪ್ಪಿಯೂ ಮೂರು ಜನ ಏನಾದರೂ ಬೈಕ್ ನಲ್ಲಿ ರೈಡ್ ಹೋಗುವ ವೇಳೆ ಪೊಲೀಸರ ಕಣ್ಣಿಗೆ ಬಿದ್ದರೆ ದಂಡ ಬೀಳೊದು ಗ್ಯಾರಂಟಿ.

ಇದನ್ನೂ ಓದಿ : Car ತಡೆದ ಟ್ರಾಫಿಕ್‌ ಪೊಲೀಸ್‌ಗೆ ಕ್ಯಾಬ್‌ ಡ್ರೈವರ್‌ ಮಾಡಿದ್ದನ್ನು ನೋಡಿದ್ರೆ ಭಯ ಬೀಳತ್ತೀರಾ.!

ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ಸೀಟಿನ ಮೇಲಷ್ಟೇ ಅಲ್ಲ. ಕಾಲಿಡುವ ಜಾಗದಲ್ಲಿ, ಭುಜದ ಮೇಲೆ, ಬೈಕ್‌ನ ಮಡ್‌-ಗಾರ್ಡ್‌ ಮೇಲೆ ಮಕ್ಕಳೂ ಕುಳಿತಿರುವುದನ್ನು ಕಾಣಬಹುದು. ಯುವಕನು ಆರಾಮಾಗಿ ಬೈಕ್ ಓಡಿಸುತ್ತಿದ್ದೂ, ಮಕ್ಕಳು ಕೂಡ ಖುಷಿಯಿಂದ ಹಾಡು ಹಾಡುತ್ತ ಜಾಲಿ ರೈಡನ್ನು ಎಂಜಾಯ್ ಮಾಡುತ್ತಿದ್ದಾರೆ.

ಈ ವೀಡಿಯೊವನ್ನು @NishiChoudhar15 ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. गिन कर बताइये कितने हैँ ಅಂತ ಬರೆದು 😂😂😛😛 emoji  ಬಳಸಲಾಗಿದೆ. ಈಗಾಗಲೇ ಈ ವಿಡಿಯೋವು ಇಪ್ಪತೈದು ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಅವರವರ ಭಾವನೆಗಳಿಗೆ ತಕ್ಕಂತೆ ಪ್ರತಿಕ್ರಿಯೆಗಳನ್ನು ವ್ಯಕ್ತವಾಗಿವೆ.

 गिन कर बताइये कितने हैँ 😂😂😛😛 pic.twitter.com/r1m6O0FTwp

spot_img
spot_img
- Advertisment -spot_img