ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಆದಾಯ ಇಲಾಖೆಯಲ್ಲಿ ಒಟ್ಟು 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪ್ರಮುಖ ದಿನಾಂಕ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕೊಡಲಾಗಿದೆ. ಇದೆಲ್ಲವನ್ನು ಅಭ್ಯರ್ಥಿಗಳು ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು.
ಇದನ್ನು ಓದಿ : ಸ್ಮಾರ್ಟ್‌ಫೋನ್ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿಯಲು ಈ Code ಬಳಸಿ.!
ಈಗಾಗಲೇ ಇದರ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿತ್ತು. ಅಲ್ಲದೆ ಹಲವು ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅಪ್ಲೇ ಮಾಡಿರದ ಅಭ್ಯರ್ಥಿಗಳು ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ರಾಜ್ಯ ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅರ್ಜಿ ಸಲ್ಲಿಕೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡಲಾಗಿದೆ.
ಹುದ್ದೆಯ ಹೆಸರು : ಗ್ರಾಮ ಆಡಳಿತ ಅಧಿಕಾರಿ
ವೇತನಶ್ರೇಣಿ : ಮಾಸಿಕ ರೂ.21,400/- ರಿಂದ ರೂ. 42,000/-
ವಿದ್ಯಾರ್ಹತೆ : ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಿರಬೇಕು.
ಡಿಪ್ಲೋಮಾ, 2 ವರ್ಷದ ಐಟಿಐ, ಜೆಎಲ್ಡಿಸಿ ಮುಗಿಸಿದವರು ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಕೆ ಮಾಡುವ ವಿಧಾನ : ಆನ್ಲೈನ್ ಮಾತ್ರ.
ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ.
ಇದನ್ನು ಓದಿ : ವರ ಮಾಡಿದ ಈ ಕೆಲಸಕ್ಕೆ ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ Viral.!
ವಯೋಮಿತಿ ಸಡಿಲಿಕೆ :
ಎಸ್ಸಿ/ಎಸ್ಟಿ/ಪ್ರವರ್ಗ- 1 ಅಭ್ಯರ್ಥಿಗಳು : 40 ವರ್ಷ.
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳು : 38 ವರ್ಷ.
ಸಾಮಾನ್ಯ ಅಭ್ಯರ್ಥಿಗಳು : 35 ವರ್ಷ ಮಾತ್ರ
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ : ಸೆಪ್ಟಂಬರ್ 28, 2024.
ಶುಲ್ಕ ಪಾವತಿಸಲು ಕೊನೆ ದಿನಾಂಕ : ಸೆಪ್ಟಂಬರ್ 29, 2024.
ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಲಿಂಕ್ ಕ್ಲಿಕ್ ಮಾಡಿ : https://cetonline.karnataka.gov.in/kea/vacrec24