ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ 3317 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ನೇಮಕ ಪ್ರಾಧಿಕಾರ : ವೆಸ್ಟ್ ಸೆಂಟ್ರಲ್ ರೈಲ್ವೆ, ಆರ್‌ಆರ್‌ಸಿ
ಹುದ್ದೆ ಹೆಸರು : ಅಪ್ರೆಂಟಿಸ್ ತರಬೇತುದಾರರು
ಹುದ್ದೆಗಳ ಸಂಖ್ಯೆ : 3317
ಹುದ್ದೆ ಅವಧಿ : 1 ವರ್ಷ
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್
ಇದನ್ನು ಓದಿ : Health : ಬೆಲ್ಲದ ಚಹಾ ಅಥವಾ ಸಕ್ಕರೆ ಚಹಾ – ಆರೋಗ್ಯಕ್ಕೆ ಯಾವುದು ಉತ್ತಮ.?
ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ವಿದ್ಯಾರ್ಹತೆ :
ಮೆಟ್ರಿಕ್ಯೂಲೇಷನ್/ ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಶಿಕ್ಷಣ ಉತ್ತೀರ್ಣರಾಗಿರಬೇಕು. ಐಟಿಐ ಶಿಕ್ಷಣದ ಎನ್‌ಸಿವಿಟಿ / ಎಸ್‌ಸಿವಿಟಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.
ವಯಸ್ಸಿನ ಅರ್ಹತೆ :
ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅರ್ಜಿ ಸಲ್ಲಿಸಲು ಅನ್ವಯವಾಗಲಿವೆ.
ಇದನ್ನು ಓದಿ : Video : ರೀಲ್ಸ್ ಮಾಡುವಾಗ ಬೈಕ್ ಗೆ ಡಿಕ್ಕಿಯಾದ ಕಾರು ; ಇಬ್ಬರ ಸ್ಥಿತಿ ಗಂಭೀರ.!
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.100
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಜನ್ಮ ದಿನಾಂಕ ದಾಖಲೆ
ಐಟಿಐ ಪಾಸ್ ಅಂಕಪಟ್ಟಿ (ಎನ್‌ಸಿವಿಟಿ / ಎಸ್‌ಸಿವಿಟಿ) / ದಾಖಲೆಗಳು
ಜಾತಿ ಪ್ರಮಾಣ ಪತ್ರ
ಇತರೆ ಅಗತ್ಯ ದಾಖಲೆಗಳು
ಇದನ್ನು ಓದಿ : Video : ಲಂಚದ ಹಣವನ್ನು ಹಂಚಿಕೊಳ್ಳುತ್ತಿದ್ದ ಮೂವರು ಪೊಲೀಸರು ಸಸ್ಪೆಂಡ್.!
ಹೆಚ್ಚಿನ ಮಾಹಿತಿಗಳಿಗಾಗಿ ಅಧಿಸೂಚನೆ ಲಿಂಕ್ https://nitplrrc.com/RRC_JBP_ACT2024/ಕ್ಲಿಕ್ ಮಾಡಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೆರೆದ ಸದರಿ ವೆಬ್ ಪೇಜ್‌ನಲ್ಲಿ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಗಳನ್ನು ನೀಡಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-09-2024
ಅಧಿಕೃತ ವೆಬ್‌ಸೈಟ್ ವಿಳಾಸ : https://nitplrrc.com