Sunday, December 8, 2024
HomeInternationalJob : ಪಿಯುಸಿ ಪಾಸಾದವರಿಗೆ ಲೋಕಾಯುಕ್ತದಲ್ಲಿ ಉದ್ಯೋಗಾವಕಾಶ.!
spot_img

Job : ಪಿಯುಸಿ ಪಾಸಾದವರಿಗೆ ಲೋಕಾಯುಕ್ತದಲ್ಲಿ ಉದ್ಯೋಗಾವಕಾಶ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್ \’ಸಿ\’ ವೃಂದದ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 14 Clerk Co. Typist ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಕ್ಲರ್ಕ್- ಕಂ- ಟೈಪಿಸ್ಟ್
ಹುದ್ದೆಗಳ ಸಂಖ್ಯೆ : 14

ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!

ವಿದ್ಯಾರ್ಹತೆ :
ಪದವಿ ಪೂರ್ವ ಶಿಕ್ಷಣ ಪರೀಕ್ಷೆ (PUC) ಅಥವಾ ತತ್ಸಮಾನ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.

ವಯೋಮಿತಿ :
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು 18 ವರ್ಷಗಳು ತುಂಬಿರಬೇಕು.

ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಮತ್ತು ಮಾಜಿ ಸೈನಿಕರಿಗೆ : 250 ರೂ.

ಇದನ್ನು ಓದಿ : ಶಾಸಕ ಮುನಿರತ್ನಗೆ ಸಹಕಾರ ಆರೋಪ : ಪೊಲೀಸ್ ಇನ್ಸ್‌ಪೆಕ್ಟರ್ Arrest.!

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 29 (ಮಧ್ಯರಾತ್ರಿ 11.59 ಗಂಟೆಯವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 30 (ಮಧ್ಯರಾತ್ರಿ 11.59 ಗಂಟೆಯವರೆಗೆ)

ಹೆಚ್ಚಿನ ಮಾಹಿತಿಗಾಗಿ :
http://lokayukta.karnataka.gov.in

 

ಹಿಂದಿನ ಸುದ್ದಿ ಓದಿ : ಹಿಂದೂ ಸಂಪ್ರದಾಯದ ಪ್ರಕಾರ, ಯಾರು ಯಾವ ಬೆರಳಿನಿಂದ ತಿಲಕವನ್ನು ಧರಿಸಬೇಕು?

ಜನಸ್ಪಂದನ ನ್ಯೂಸ್, ಡೆಸ್ಕ್ : ತಿಲಕ ಇಟ್ಟ ವ್ಯಕ್ತಿಯ ಮುಖವು ಅತಿ ಸುಂದರವಾಗಿ ಕಾಣುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಕೇವಲ ಸಂಕೇತವಲ್ಲ. ಧೈರ್ಯ, ಸಕಾರಾತ್ಮಕತೆ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಇದನ್ನು ಓದಿ : Job : ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಗುಡ್ ನ್ಯೂಸ್.!

ಪ್ರತಿಯೊಂದು ಬೆರಳಿನ ಮೂಲಕ ಕುಂಕುಮ ಹಚ್ಚಿಕೊಳ್ಳಲು ಒಂದು ವಿಭಿನ್ನ ಅರ್ಥವಿದೆ. ಅದು ಏನಂತಾ ಮುಂದೆ ಓದಿ.

ಉಂಗುರ ಬೆರಳು :
ಭಕ್ತಿ ಮತ್ತು ಬದ್ಧತೆಗೆ ಸಂಬಂಧಿಸಿದ ಉಂಗುರದ ಬೆರಳಿನಿಂದ ತಿಲಕವನ್ನು ಹಚ್ಚುವಾಗ ಅದು ಶಾಂತಿ, ಮಾನಸಿಕ ಸ್ಥಿರತೆ, ಬುದ್ಧಿವಂತಿಕೆಯ ಬಿಂದುಗಳನ್ನು ಸುಧಾರಿಸುತ್ತದೆ. ಅಲ್ಲದೇ ಬೌದ್ಧಿಕ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ

ಈ ಬೆರಳಿನ ಸಹಾಯದಿಂದ ದೇವರಿಗೆ ತಿಲಕವನ್ನು ಇಟ್ಟರೆ ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಹಣೆಗೆ ತಿಲಕ ಅಥವಾ ಕುಂಕುಮ ಇಡುವ ವೇಳೆ ಉಂಗುರದ ಬೆರಳನ್ನು ಉಪಯೋಗಿಸಿದರೆ ಒಳ್ಳೆಯದು.

ಇದನ್ನು ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!

ಮಧ್ಯದ ಬೆರಳು :
ಶನಿ ಗ್ರಹವನ್ನು ಪ್ರತಿನಿಧಿಸುವ ಮಧ್ಯದ ಬೆರಳು, ನಮ್ಮ ಬದುಕಿನಲ್ಲಿ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಸಾಮಾನ್ಯವಾಗಿ ತಮ್ಮ ಮನೆಯ ಮಕ್ಕಳಿಗೆ ಹಿರಿಯರು ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚುತ್ತಾರೆ. ಈ ಬೆರಳಿನಿಂದ ಹಚ್ಚಿದರೆ ದೀರ್ಘಾಯುಷ್ಯ ಮತ್ತು ಸುರಕ್ಷತೆ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು.

ತೋರು ಬೆರಳು :
ತೋರು ಬೆರಳನ್ನು ಬದುಕಿದವರಿಗೆ ಕುಂಕುಮ ಅಥವಾ ತಿಲಕ ಹಚ್ಚಲು ಎಂದಿಗೂ ಬಳಸುವುದಿಲ್ಲ. ಅಗಲಿದ ಅಥವಾ ಮರಣ ಹೊಂದಿದ ಜನರನ್ನು ಗೌರವಿಸುವ ವೇಳೆ ತೋರು ಬೆರಳನ್ನು ಮಾತ್ರ ಬಳಸಲಾಗುತ್ತದೆ. ಈ ತೋರುಬೆರಳು ಮೋಕ್ಷಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಮರಣದ ಆಚರಣೆಗಳನ್ನು ಮಾಡುವಾಗ ಅಥವಾ ತರ್ಪಣ ವಿಧಿಯಲ್ಲಿ ಇದನ್ನು ಬಳಸುತ್ತಾರೆ.

ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

ಹೆಬ್ಬೆರಳು :
ಯಶಸ್ಸು, ವಿಜಯ ಮತ್ತು ಶಕ್ತಿಯ ಆಶೀರ್ವಾದವನ್ನು ಸ್ವೀಕರಿಸಲು ಅಥವಾ ನೀಡಲು ಅತ್ಯುತ್ತಮ ಬೆರಳು ಎಂದರೆ ಅದು ಹೆಬ್ಬೆರಳು. ಹಿಂದೆ ರಾಜರ ಕಾಲದಲ್ಲಿ ವಿಜಯ ಸಾಧಿಸಿ ಬರಲು ಈ ಹೆಬ್ಬೆರಳನ್ನು ಬಳಸಿ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಿದ್ದರು. ಜನರು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವ ಸಂದರ್ಭ ಈ ಹೆಬ್ಬೆರಳಿನಿಂದ ಕುಂಕುಮ ಹಚ್ಚಿಕೊಂಡು ತೆರಳುವರು. ಹಿಂದೂ ಸಂಪ್ರದಾಯವು ವ್ಯಕ್ತಿಯ ಹಣೆಗೆ ಈ ಬೆರಳಿನಿಂದ ತಿಲಕವಿಟ್ಟರೆ ತುಂಬಾ ಒಳ್ಳೆಯದು ಎಂದು ನಂಬಿಕೆ ಇಟ್ಟಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments