ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದು ಕಪ್ ಚಹಾ ಕುಡಿಯೋದು ನಿಮ್ಮ ಇಡೀ ದಿನದ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ನೀವು ಆ ಚಹಾಕ್ಕೆ ಸಕ್ಕರೆಯನ್ನು ಸೇರಿಸಿದರೆ, ಅದು ನಿಮಗೆ ಹಾನಿಕಾರಕವಾಗಿದೆ. ಹಾಗಾಗಿ ಅನೇಕ ಜನರು ಚಹಾದಲ್ಲಿ ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುತ್ತಾರೆ.
ಈಗಂತೂ ಬೆಲ್ಲದ ಚಹಾ ಅತ್ಯಂತ ಜನಪ್ರಿಯವಾಗಿದೆ. ಆದರೆ ಇದು ನಿಜವಾಗಿಯೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಅಂತ ಬನ್ನಿ ತಿಳಿಯೋಣ.
ಇದನ್ನು ಓದಿ : ಈ ಇಲಾಖೆಯಲ್ಲಿ 10 ವರ್ಷಗಳ ಕಾಲ ದುಡಿದವರ ಕೆಲಸ ಖಾಯಂಗೊಳಿಸಿದ Highcourt.!
ಬೆಲ್ಲವು, ಕಬ್ಬು ಅಥವಾ ತಾಳೆ ರಸದಿಂದ ತಯಾರಿಸಿದ ಸಂಸ್ಕರಿಸಿದ ಸಿಹಿ ಪದಾರ್ಥ. ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಕಡಿಮೆ ಗ್ಲೈಸೆಮಿಕ್ ಹೊಂದಿರುವ ಇದು ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ.
ಆದರೆ ಸಕ್ಕರೆ ಚಹಾಕ್ಕಿಂತ ಬೆಲ್ಲದ ಚಹಾ ಕುಡಿಯುವುದು ಒಳ್ಳೆಯದೇ.?
ಖನಿಜಗಳು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಅಥವಾ ನಾಶಪಡಿಸುವ ಸಂಯುಕ್ತಗಳನ್ನು ಚಹಾವು ಹೊಂದಿರುತ್ತದೆ. ಹಾಗಾಗಿ ಚಹಾಕ್ಕೆ ಬೆಲ್ಲ ಸೇರಿಸಿ ಸೇವಿಸಿದರೂ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಇನ್ನೂ ದೇಹವು ಗ್ಲೂಕೋಸ್ ಅನ್ನು ಎಲ್ಲಿಂದ ಪಡೆಯುತ್ತದೆ ಎಂಬುದು ಮುಖ್ಯವಲ್ಲ, ಅದು ಬೆಲ್ಲ ಅಥವಾ ಸಕ್ಕರೆ. ಏಕೆಂದರೆ ಗ್ಲೂಕೋಸ್‌ಗೆ ನಿಮ್ಮ ದೇಹದ ಪ್ರತಿಕ್ರಿಯೆಯು ಇನ್ಸುಲಿನ್ ಸ್ಪೈಕ್ ಒಂದೇ ಆಗಿರುತ್ತದೆ. ಆದ್ದರಿಂದ, ನೀವು ಸಕ್ಕರೆಯ ಬದಲಿಗೆ ಬೆಲ್ಲವನ್ನು ಆಯ್ಕೆ ಮಾಡಬಹುದು, ಆದರೆ ನೀವು ಇನ್ಸುಲಿನ್ ಸ್ಪೈಕ್ ಅನ್ನು ತಪ್ಪಿಸಲು ಸಾಧ್ಯವಿಲ್ಲ.
ಬೆಲ್ಲ, ಜೇನುತುಪ್ಪ ಅಥವಾ ಸಕ್ಕರೆ ಯಾವುದೇ ರೀತಿಯ ಸಿಹಿಕಾರಕವು ನಿಮ್ಮ ಚಹಾದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುವುದಿಲ್ಲ. ಹೀಗಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ.
ಬೆಳಿಗ್ಗೆ ಎದ್ದಾಗ ಚಹಾವನ್ನು ಕುಡಿಯಬೇಡಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದರಿಂದ ಕಾರ್ಟಿಸೋಲ್ ಉತ್ಪಾದನೆಯನ್ನು ತಡೆಯಬಹುದು, ಇದು ದಿನ ಪ್ರಾರಂಭವಾಗುವ ಮೊದಲು ಆತಂಕವನ್ನು ಉಂಟುಮಾಡಬಹುದು.
ಇದನ್ನು ಓದಿ : ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲಿ ಹೊಡೆದ ವಿದ್ಯಾರ್ಥಿನಿ; Video viral.!
ಚಹಾ ಆಮ್ಲೀಯತೆ ಉಂಟುಮಾಡಿ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಅದಕ್ಕಾಗಿಯೇ ನೀವು ಊಟಕ್ಕೆ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಕುಡಿಯುವುದನ್ನು ತಪ್ಪಿಸಬೇಕು.