ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ವಿಟಮಿನ್ಸ್ ಬಹಳಾನೇ ಮುಖ್ಯ. ಅದರಲ್ಲೂ ವಿಟಮಿನ್ ಬಿ 12 ಕೊರತೆಯು ಸಾಮಾನ್ಯ ಶಾರೀರಿಕ ಕಾರ್ಯಗಳನ್ನು ಬೆಂಬಲಿಸಲು ದೇಹದಲ್ಲಿ ವಿಟಮಿನ್ ಬಿ 12 ನ ಸಾಕಷ್ಟು ಮಟ್ಟಗಳು ಇದ್ದಾಗ ಸಂಭವಿಸುವ ಸ್ಥಿತಿಯಾಗಿದೆ. ವಿಟಮಿನ್ ಬಿ 12 ಅನ್ನು ಕೋಬಾಲಾಮಿನ್ ಎಂದೂ ಕರೆಯುತ್ತಾರೆ.
ಇದು ವಿವಿಧ ದೈಹಿಕ ಪ್ರಕ್ರಿಯೆಗಳಿಗೆ ಪ್ರಮುಖವಾದ ಪೋಷಕಾಂಶವಾಗಿದೆ, ವಿಶೇಷವಾಗಿ ನರಮಂಡಲದಲ್ಲಿ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ. ಈ ವಿಟಮಿನ್ ಕೊರತೆಯು ಚಿಕಿತ್ಸೆ ನೀಡದೆ ಬಿಟ್ಟರೆ ಹಲವಾರು ರೋಗಲಕ್ಷಣಗಳು ಮತ್ತು ತೊಡಕುಗಳಿಗೆ ಕಾರಣವಾಗಬಹುದು.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ದೇಹದಲ್ಲಿ ಬಿ 12 ವಿಟಮಿನ್‌ಗಳು ಕಡಿಮೆಯಾದರೆ ಕ್ರಮೇಣ ಗಂಭೀರ ಕಾಯಿಲೆಗಳು ಬರುತ್ತವೆ. ಸ್ಟ್ರೋಕ್, ಹಾರ್ಟ್ ಅಟ್ಯಾಕ್, ನರದೋಷಗಳು ಕಾಣಿಸಿಕೊಳ್ಳಬಹುದು.
ವಿಟಮಿನ್ ಬಿ 12 ಕೊರತೆಯಾದರೆ ದೇಹದಲ್ಲಿ ರಾತ್ರಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇದನ್ನು ಓದಿ : ಸೀಮಂತದ ದಿನವೇ ಪತ್ನಿಯ ಅನೈತಿಕ ಸಂಬಂಧದ ವಿಡಿಯೋ ಅತಿಥಿಗಳ ಮುಂದೆ Leak ಮಾಡಿದ ಪತಿ.!
* ಎರಡು -ಮೂರು ವಾರದವರೆಗೂ ನಿಮಗೆ ನಿರಂತರವಾಗಿ ನಿದ್ರಾ ಹೀನತೆ ಮುಂದುವರಿದಿದ್ದರೆ ಮೊದಲು ಹೋಗಿ ಟೆಸ್ಟ್ ಮಾಡಿಸಿಕೊಳ್ಳಿ. ಇದೂ ಸಹ ವಿಟಮಿನ್ ಬಿ 12 ಕೊರತೆಯಿಂದಲೇ ಉಂಟಾಗುವ ಸಮಸ್ಯೆಯಾಗಿರುತ್ತದೆ.
* ರಾತ್ರಿ ಮಲಗಿದ ಸಂದರ್ಭದಲ್ಲಿ ಅಜೀರ್ಣ, ಗ್ಯಾಸ್ಟ್ರಿಕ್, ವಾಕರಿಕೆ, ಭೇದಿಯಂಥ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಪ್ರತಿದಿನವೂ ಮಲಬದ್ಧತೆಯಾಗುತ್ತಿದ್ದರೆ ಕೂಡಲೇ ವಿಟಮಿನ್ ಬಿ 12 ಸರಿಯಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಿ. ರಾತ್ರಿ ಕಾಡುವ ಹೊಟ್ಟೆಯ ಸಮಸ್ಯೆಗಳು ಇದರ ಪ್ರಮುಖ ಲಕ್ಷಣವಾಗುತ್ತಿದೆ.
ಇದನ್ನು ಓದಿ : Strange ಸಂಪ್ರದಾಯ : ಭಾರತದ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳು ಬೆತ್ತಲೆಯಾಗಿರ್ತಾರೆ.!
* ರಾತ್ರಿ ಮಲಗಿದ ಸಂದರ್ಭ ಕಾಲುಗಳ ರಕ್ತನಾಳಗಳ ಹಿಗ್ಗುವಿಕೆ ಉಂಟಾಗುತ್ತಿದ್ದರೆ ಅದೂ ಸಹ ವಿಟಮಿನ್ ಬಿ 12 ಕೊರತೆಯ ಪ್ರಮುಖ ಲಕ್ಷಣವಾಗಿರುತ್ತದೆ. ಇದನ್ನ ಎಂದಿಗೂ ನಿರ್ಲಕ್ಷಿಸಬಾರದು..
* ಪ್ರತಿದಿನವೂ ನಿಮಗೆ ರಾತ್ರಿ ಸ್ನಾಯು ಸೆಳೆತ, ವೀಕ್‌ನೆಸ್ ಕಾಣಿಸಿಕೊಳ್ಳುತ್ತಿದ್ದರೆ ದಯವಿಟ್ಟು ನಿರ್ಲಕ್ಷಿಸಬೇಡಿ..ಇದು ಬಿ 12 ವಿಟಮಿನ್ ಕೊರತೆಯ ಲಕ್ಷಣ ಆಗಿರುತ್ತದೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
* ಮನುಷ್ಯನಿಗೆ ತಲೆ ನೋವು ಕಾಮನ್. ಆದರೆ ಕೆಲವೊಮ್ಮೆ ಗಂಭೀರ ರೋಗದ ಲಕ್ಷಣವೂ ಆಗಿರುತ್ತದೆ. ಪ್ರತಿದಿನ ರಾತ್ರಿ ನಿಮಗೆ ವಿಪರೀತ ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ಇದೂ ಕೂಡ ವಿಟಮಿನ್ ಬಿ 12 ಕೊರತೆಯ ಲಕ್ಷಣವಾಗಿರುತ್ತದೆ..
ಹೀಗಾಗಿ ನೀವು ಬಾಳೆಹಣ್ಣು, ಸ್ಟ್ರಾಬೆರಿ, ಕ್ಯಾರೆಟ್, ಮೊಟ್ಟೆ, ಚಿಕನ್‌ನಂಥ ಬಿ12 ವಿಟಮಿನ್‌ಗಳು ಜಾಸ್ತಿ ಇರುವ ಆಹಾರಗಳನ್ನ ನಿಯಮಿತವಾಗಿ ತಿನ್ನುವುದು ಉತ್ತಮ.