Friday, July 12, 2024
spot_img
spot_img
spot_img
spot_img
spot_img
spot_img

Instant ಕರ್ಮ ; ಅಲ್ಲೇ ಡ್ರಾ, ಅಲ್ಲೇ ಬಹುಮಾನ ; ಹೇಗಂತ್ತಿರಾ.? ಈ ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯೋರ್ವಳು ತನ್ನ ಬಾಯ್ ಫ್ರೆಂಡ್ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ದೇವಸ್ಥಾನದಲ್ಲಿ ಇಟ್ಟಿದ್ದ ಆರತಿ ತಟ್ಟೆಯಿಂದ ಸಿಗರೇಟ್ ಹಚ್ಚಿ ದೇವಸ್ಥಾನದಲ್ಲೇ ಸೇದಲು ಶುರು ಮಾಡಿರುವ ಘಟನೆ ನಡೆದದ್ದು, ಅವಳು ಮಾಡಿದ ಅನಾಚಾರದ ಫಲ ದೇವಸ್ಥಾನದಲ್ಲಿಯೇ ಉಂಡಿದ್ದಾಳೆ. ಈ ಇನ್‌ಸ್ಟೆಂಟ್‌ ಕರ್ಮದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮಾಡಿದ ಕರ್ಮ ಯಾರನ್ನೂ ಸುಮ್ಮನೆ ಬಿಡೋಲ್ಲ ಎಂಬ ಮಾತಿಗೆ ಇಲ್ಲೊಬ್ಬ ಯುವತಿಯ ವಿಚಾರದಲ್ಲಿ ಈ ಅಕ್ಷರಶಃ ನಿಜವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಸಹ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂದಿದ್ದಾರೆ.

ನಿತಿನ್​ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ.!

ಹೌದು, ತುಂಡುಡುಗೆತೊಟ್ಟು ದೇವಾಲಯಕ್ಕೆ ಬಂದದ್ದು ಅಲ್ಲದೆ, ಅಲ್ಲಿಯೇ ಇರು ಆರತಿ ತಟ್ಟೆಗೆ ಸಿಗರೇಟ್‌ ಹೊತ್ತಿಸಿ ಸೇದುವ ಮೂಲಕ ದೇವಸ್ಥಾನದ ಪವಿತ್ರೆಯನ್ನು ಹಾಳು ಮಾಡಿದ್ದಾಳೆ. ಪವಿತ್ರ ಜಾಗದಲ್ಲಿ ಸಿಗರೇಟ್‌ ಸೇದುವ ಮೂಲಕ ಅನಾಚಾರ ಮೆರೆದಿದ್ದಾಳೆ.

ಕರ್ಮದ ಫಲ ಯಾರನ್ನು ಬಿಡುವದಿಲ್ಲ ಎಂಬ ಮಾತಿನಂತೆ ಯುವತಿ ಸಿಗರೇಟ್‌ ಸೇದುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವ ಸಂದರ್ಭದಲ್ಲಿ ಅಲ್ಲಿಯೇ ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ. ಈ ದೃಶ್ಯ ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,  ಇನ್‌ಸ್ಟೆಂಟ್‌ ಕರ್ಮದ ಈ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ವಿಡಿಯೋವನ್ನು ಶುಭಾಂಗಿ ಪಂಡಿತ್‌ (Babymishra_) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ದೇವಾಲಯದಲ್ಲಿ ಸಿಗರೇಟ್‌ ಸೇದುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು.

ಶುಗರ್, ಕೊಲೆಸ್ಟ್ರಾಲ್, ಕ್ಯಾನ್ಸರ್ ಸೇರಿ 10 ರೋಗಗಳಿಗೆ ರಾಮಬಾಣ ಈ ಪಾನೀಯ.!

ದೇವಾಲಯ ಒಂದಕ್ಕೆ ತಾಯಿ ಮಗಳಿಬ್ಬರು ಬರುತ್ತಾರೆ. ತಾಯಿ ದೇವರಿಗೆ ಭಕ್ತಿಯಿಂದ ಕೈ ಮುಗಿದು ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ತುಂಡುಡುಗೆ ತೊಟ್ಟು ಬಂದ ಮಗಳು ತಾನು ಎಲ್ಲಿದ್ದೇನೆ ಎಂಬ ಅರಿವಿಲ್ಲದೆ, ತನ್ನ ತಾಯಿಯ ಕಣ್ಣು ತಪ್ಪಿಸಿ ದೇವಾಲಯದಲ್ಲಿದ್ದ ದೀಪದಲ್ಲಿ ಸಿಗರೇಟ್‌ ಹೊತ್ತಿಸಿ ಅದನ್ನು ಸೇದುತ್ತಾ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿರುತ್ತಾಳೆ. ಇದನ್ನು ಕಂಡ ತಾಯಿ ಆಕೆಗೆ ಒಂದೇಟು ಕೊಟ್ಟು ಹೊರಗೆ ದಬ್ಬುತ್ತಾಳೆ. ಹೀಗೆ ಓಡುತ್ತಾ ಹೊರ ಹೋಗುವ ಸಂದರ್ಭದಲ್ಲಿ ಆ ಯುವತಿ ಜಾರಿ ಬಿದ್ದು ಸೊಂಟ ಮುರಿದುಕೊಳ್ಳುತ್ತಾಳೆ. ನಂತರ ಅಲ್ಲಿದ್ದ ಪುರೋಹಿತರು ಮತ್ತು ಭಕ್ತಾದಿಗಳು ಆಕೆಯನ್ನು ಮೇಲಕ್ಕೆತ್ತುತ್ತಾರೆ.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಇದು ಸ್ಕ್ರಿಪ್ಟೆಡ್‌ ವಿಡಿಯೋ ಅಂತಾ ಹೇಳಿದ್ರೆ, ಇನ್ನೂ ಕೆಲವರು ಆ ಯುವತಿಯ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

spot_img
spot_img
- Advertisment -spot_img