ಜನಸ್ಪಂದನ ನ್ಯೂಸ್, ಡೆಸ್ಕ್ : ಬಟ್ಟೆಯ ಮೇಲೆ ಕಲೆಗಳು ಬೇಡಾ ಅಂದ್ರು ಹೇಗೋ ಆಗಿ ಬಿಡುತ್ತವೆ. ಅದರಲ್ಲು ಹೆಚ್ಚಾಗಿ ಮಕ್ಕಳು ಬಟ್ಟೆಯ ಮೇಲೆ ಪೆನ್ ಗೆರೆಗಳು ಸೇರಿದಂತೆ ಅನೇಕ ಕಲೆಗಳನ್ನು ಹೆಚ್ಚಾಗಿ ಮಾಡಿಕೊಂಡಿರುತ್ತವೆ.
ಈ ರೀತಿಯ ಕಲೆಯಾದ ಬಟ್ಟೆಯನ್ನು ಕಲೆಮುಕ್ತಗೊಳಿಸುವುದು ದೊಡ್ಡ ತಲೆ ನೋವಿನ ಕೆಲಸ ಆಗಿರುತ್ತೇ. ಆದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ಕೇವಲ ಒಂದೇ ಒಂದು ವಸ್ತು ಬಳಸಿ ಬಟ್ಟೆ ಮೇಲಿನ ಶಾಯಿ ಕಲೆಯನ್ನು ತೆಗೆದುಹಾಕಬಹುದಾದ ಸಿಂಪಲ್ ಟಿಪ್ಸ್ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನು ಓದಿ : SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವೈರಲ್ ಆಗಿರುವ ವಿಡಿಯೋದಲ್ಲಿ ಕೇವಲ 1 ನಿಮಿಷದಲ್ಲಿ ಶಾಯಿ ಕಲೆ ಮಾಯ ಮಾಡುವ ಬಗ್ಗೆ ಯುವತಿಯೋರ್ವಳು ಹೇಳಿರುವ ಸಿಂಪಲ್ ಟಿಪ್ಸ್ ಇರುವ ವಿಡಿಯೋ ಇದಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಚಿಕ್ಕ ಮಗುವಿನ ಶರ್ಟ್ ಒಂದರ ಮೇಲಿನ ಪೆನ್ನಿನ ಗೆರೆಯನ್ನು ಸುಲಭವಾಗಿ ತೆಗೆಯುವುದನ್ನು ಕಾಣಬಹುದು.
@priyavijaykitchen ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 13 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಚಿಕ್ಕ ಮಗುವಿನ ಶರ್ಟ್ ಒಂದರ ಮೇಲಿನ ಪೆನ್ನಿನ ಗೆರೆಯನ್ನು ಸುಲಭವಾಗಿ ತೆಗೆಯುವುದನ್ನು ಕಾಣಬಹುದು. ಕೇವಲ ಡೆಟಾಲ್ ಒಂದನ್ನು ಬಳಸಿ ಬ್ರಶ್ ಸಹಾಯದಿಂದ 1 ನಿಮಿಷದಲ್ಲಿ ಪೆನ್ನಿನ ಗೆರೆ ಕಲೆ ತೆಗೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ : ಭಾರತೀಯ ವಾಯು ಪಡೆಯಲ್ಲಿ ತಾಂತ್ರಿಕ & ತಾಂತ್ರಿಕೇತರ 304 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಸಿಂಪಲ್ ಟಿಪ್ಸ್ನ ವಿಡಿಯೋ ಸಾಮಾಜಿಕ ಜಾಲತಾಣ ಭಾರೀ ವೈರಲ್ ಆಗುತ್ತಿದೆ. ಸಾಕಷ್ಟು ನೆಟ್ಟಿಗರು ವಿಡಿಯೋಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೇ 398,915 ಜನರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram