Sunday, December 8, 2024
HomeBelagavi Newsಸಕ್ರಿಯ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿ : ತಪಸಿ.
spot_img

ಸಕ್ರಿಯ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿ : ತಪಸಿ.

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಗೋಕಾಕ : ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ಸದಸ್ಯರನ್ನಾಗಿ ಮಾಡಿಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯಲು ಮುಂದಾಗುವಂತೆ ರಾಷ್ಟ್ರೀಯ ಬಿಜೆಪಿ (BJP) ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು.

ಗುರುವಾರದಂದು ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ (Arabhavi) ಮಂಡಲದಿಂದ ಜರುಗಿದ ಸಂಘಟನಾ ಪರ್ವದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಿಜೆಪಿಯು ಅತೀ ಹೆಚ್ಚಿನ ಸದಸ್ಯರನ್ನು ಹೊಂದಿರುವ ಏಕಮೇವ ಪಕ್ಷವಾಗಿದೆ ಎಂದು ತಿಳಿಸಿದರು.

ಇದನ್ನು ಓದಿ : ಮಾರಕಾಸ್ತ್ರಗಳಿಂದ ಕೊಚ್ಚಿ Rowdy Sheeter ಬರ್ಬರ ಹತ್ಯೆ.!

ಈಗಾಗಲೇ ಪಕ್ಷದಿಂದ ಸಕ್ರಿಯ ಸದಸ್ಯತ್ವದ ನೋಂದಣಿ ಅಭಿಯಾನವು ನಡೆಯುತ್ತಿದ್ದು, ಈ ಅಭಿಯಾನವನ್ನು ಯಶಸ್ವಿಯಾಗಿ ಮಾಡಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ಸದಸ್ಯರನ್ನು ಮಾಡಿ ಮುಂಬರುವ ತಾ.ಪಂ. ಮತ್ತು ಜಿ.ಪಂ. (ZP) ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ಕೇಕೇ ಹಾರಿಸಲು ಶ್ರಮಿಸಲು ತಿಳಿಸಿದರು.

ವೇದಿಕೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ, ಪರಸಪ್ಪ ಬಬಲಿ, ಮುತ್ತೆಪ್ಪ ಮನ್ನಾಪೂರ, ಮಹಾಂತೇಶ ಕುಡಚಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಸುದ್ದಿ ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಬಸವನಗುಡಿ ಠಾಣೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ವಿರುದ್ಧ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು (private hospital doctor) ದೂರು ನೀಡಿದ್ದಾರೆ.

ವೈದ್ಯೆಗೆ ನಗ್ನ ಫೋಟೋ ಕಳಿಸುವಂತೆ ಪಿಎಸ್‌ಐ ಕಿರುಕುಳ (harassment) ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್​ ಬಿ. ದಯಾನಂದ್​​ ಅವರಿಗೆ ವೈದ್ಯೆ ದೂರು ನೀಡಿದ್ದಾರೆ.

ಇದನ್ನು ಓದಿ : Health : ಈ ಚಳಿಗಾಲದಲ್ಲೂ ಅತಿಯಾಗಿ ಬೆವರುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಬಸವನಗುಡಿ ಠಾಣೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಜೋಡಟ್ಟಿ​​ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ.

ಫೇಸ್​ಬುಕ್​​ ಮೂಲಕ 2020ರಲ್ಲಿ ಪಿಎಸ್​​ಐಗೆ ವೈದ್ಯೆಯ ಪರಿಚಯವಾಗಿದೆ. ಈ ವೇಳೆ ಪೊಲೀಸ್​​ ಅಕಾಡೆಮಿಯಲ್ಲಿ PSI ಟ್ರೈನಿಂಗ್​ನಲ್ಲಿದ್ದರು. ಯುವತಿ ಸಹ MBBS ವ್ಯಾಸಂಗ ಮಾಡುತ್ತಿದ್ದಳು. ಅದೇ ವರ್ಷ ಇಬ್ಬರೂ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ (love) ಬಿದ್ದಿದ್ದರು ಎನ್ನಲಾಗಿದೆ.

ಪಿಎಸ್‌ಐ ಯುವತಿಗೆ ನಗ್ನ ಫೋಟೋ (Nude photo) ಕಳಿಸುವಂತೆ ಕಿರುಕುಳ ನೀಡಿದ್ದು, ಈ ಮಾತಿಗೆ ಒಪ್ಪದಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ call record ತೆಗೆದು ಕಿರುಕುಳ ನೀಡುತ್ತಿರುವ ಆರೋಪಿಸಲಾಗಿದೆ. ಇದರಿಂದ ನೊಂದ ವೈದ್ಯೆ ಬೆಂಗಳೂರು ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!

ಅಲ್ಲದೇ ವೈದ್ಯೆಯಿಂದ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್​ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಹಣ ಬೇಕಾದರೆ ಠಾಣೆಗೆ ಬಂದು ತೊಗೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು (suicide attempt) ಎಂದು ದೂರಿನಲ್ಲಿ ತಿಳಿಸಲಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments