ಜನಸ್ಪಂದನ ನ್ಯೂಸ್, ನೌಕರಿ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಪರೀಕ್ಷೆ ರಿಜಿಸ್ಟ್ರೇಷನ್‌ಗೆ ಸಂಬಂಧಿಸಿದಂತೆ ಇದೀಗ ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಆಗಸ್ಟ್ 21,2024 ಅರ್ಜಿಗೆ ಕೊನೆ ದಿನವಾಗಿತ್ತು, ಕಾರಣಾಂತರಗಳಿಂದ ಈಗ ಆಗಸ್ಟ್ 28,2024 ರವರೆಗೆ ಅರ್ಜಿಗೆ ಅವಕಾಶ ನೀಡಿದೆ. ಆಕ್ತರು ದಿನಾಂಕ ವಿಸ್ತರಣೆಯ ಲಾಭವನ್ನು ಪಡೆದುಕೊಳ್ಳಹುದಾಗಿದೆ.
ನೇಮಕಾತಿ ಪ್ರಾಧಿಕಾರ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ.
ಹುದ್ದೆಗಳ ಹೆಸರು : ಪ್ರೊಬೇಷನರಿ ಆಫೀಸರ್/ಮ್ಯಾನೇಜ್ಮೆಂಟ್ ಟ್ರೈನಿ.
ಹುದ್ದೆ ಸಂಖ್ಯೆ : 4,455.
ವಿದ್ಯಾರ್ಹತೆ : ಪದವಿ ಪಾಸ್.
ಇದನ್ನು ಓದಿ : Health : ಈ 10 ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ಪ್ರವರ್ಗವಾರು ಮೀಸಲಾತಿ ಪ್ರಕಾರ ಇರುವ ಹುದ್ದೆಗಳು :
- ಎಸ್‌ಸಿ ಕೆಟಗರಿಗೆ – 657.
- ಎಸ್‌ಟಿ ಕೆಟಗರಿಗೆ – 332.
- ಒಬಿಸಿ ಕೆಟಗರಿಗೆ – 1185.
- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ – 435.
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 1846.
ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯುಸಿಒ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಐಬಿಪಿಎಸ್ ಪಿಒ, ಎಂಟಿ ಅರ್ಜಿ ಪ್ರಕ್ರಿಯೆಗಳ ವೇಳಾಪಟ್ಟಿ :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-08-2024.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28-08-2024.
ಅಪ್ಲಿಕೇಶನ್ ಶುಲ್ಕ ಪಾವತಿಗೆ ಕೊನೆ ದಿನಾಂಕ : 28-08-2024.
ಪೂರ್ವಭಾವಿ ಆನ್‌ಲೈನ್ ಪರೀಕ್ಷೆ ದಿನಾಂಕ : 2024 ರ ಅಕ್ಟೋಬರ್ ತಿಂಗಳಲ್ಲಿ.
ಆನ್‌ಲೈನ್ ಪೂರ್ವಭಾವಿ ಪರೀಕ್ಷೆ ಫಲಿತಾಂಶ ದಿನಾಂಕ : ನವೆಂಬರ್ 2024.
ಪಿಒ/ಎಂಟಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ :
ಪಿಒ/ಎಂಟಿ ಸಿಬಿಟಿ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ನವೆಂಬರ್ 2024.
ಆನ್‌ಲೈನ್ ಮೇನ್ಸ್ ಪರೀಕ್ಷೆ ದಿನಾಂಕ : ನವೆಂಬರ್ 2024.
ಮೇನ್ ಪರೀಕ್ಷೆ ಫಲಿತಾಂಶ ದಿನಾಂಕ : ಡಿಸೆಂಬರ್ 2024/ಜನವರಿ 2025.
ಸಂದರ್ಶನಕ್ಕೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಜನವರಿ/ಫೆಬ್ರುವರಿ 2025.
ಸಂದರ್ಶನ ನಡೆಸುವ ದಿನಾಂಕ : ಜನವರಿ/ಫೆಬ್ರುವರಿ 2025.
ತಾತ್ಕಾಲಿಕ ನಿಯೋಜನೆಯ ಅರ್ಹತಾ ಪಟ್ಟಿ : ಏಪ್ರಿಲ್ 2025.
ವಯೋಮಿತಿ (ದಿನಾಂಕ 01-08-2024 ಕ್ಕೆ) :
- ಕನಿಷ್ಠ 20 ವರ್ಷ, ಮತ್ತು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ.,
- ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಅರ್ಜಿ ಸಲ್ಲಿಸಲು ಹಾಗೂ ಅಧಿಸೂಚನೆಗಾಗಿ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ : https://www.ibps.in
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ SSLC ಪಾಸಾದವರಿಂದ ಅರ್ಜಿ ಆಹ್ವಾನ.!
ಅರ್ಜಿಯ ಶುಲ್ಕ :
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.850/-.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850/-.
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175/-.
- ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ಯಾಶ್ ಕಾರ್ಡ್ ಇತರೆ ಮಾರ್ಗಗಳಲ್ಲಿ ಪಾವತಿಸಬಹುದು.
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.