ಜನಸ್ಪಂದನ ನ್ಯೂಸ್, ಡೆಸ್ಕ್ : ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಬರೆಯಲು ಹೋದ ವೇಳೆ ಆತನ ಹೆಂಡ್ತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ಚಕ್ಕಂದವಾಡುತ್ತಿದ್ದ ವೇಳೆ ಮನೆಯವರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್.!
ಮೂರು ತಿಂಗಳ ಹಿಂದಷ್ಟೇ ಯುವತಿಗೆ ಮದುವೆಯಾಗಿತ್ತು. ಆದ್ರೆ ಆಕೆಗೆ ಬೇರೊಬ್ಬ ಯುವಕನ ಜೊತೆ ಸಂಬಂಧವಿತ್ತು. ಆಕೆ ಮದುವೆಯಾದ ಬಳಿಕವೂ ಗಂಡನಿಗೆ ತಿಳಿಯದಂತೆ ಪ್ರೇಮಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು.
ಪತಿ ಪೊಲೀಸ್ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ, ಇದೇ ಚಾನ್ಸ್ ಎನ್ನುತ್ತಾ ಆಕೆ ರಾತ್ರಿ 12 ಗಂಟೆ ಸುಮಾರಿಗೆ ಬಾಯ್‌ಫ್ರೆಂಡ್ ನಿಗೆ ಕಾಲ್ ಮಾಡಿ ಬಾ ಎಂದು ಕರೆಸಿಕೊಂಡಿದ್ದಾಳೆ.
ಇದನ್ನು ಓದಿ : ದೀನ್ ದಯಾಳ್ ಸ್ಪರ್ಶ್ ಯೋಜನೆ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 6 ಸಾವಿರ ಸ್ಕಾಲರ್‌ಶಿಪ್.!
ಈ ವೇಳೆ ರೂಮಿನಿಂದ ಏನೋ ಸದ್ದು ಬರುತ್ತಿದೆಯಲ್ಲಾ ಎಂದು ಮನೆಯವರು ನೋಡಲು ಹೋದಾಗ ಈ ಇಬ್ಬರೂ ಪ್ರೇಮಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೋಪದಲ್ಲಿ ಮನೆಯವರು ಆ ಇಬ್ಬರಿಗೂ ಮನಸೋಇಚ್ಛೆ ಥಳಿಸಿದ್ದಾರೆ.
ಒದೆ ತಿಂದ ಯುವಕ ಇಲ್ಲೇ ಇದ್ರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ನಂತರ ಮನೆಯವರು ಪೊಲೀಸರಿಗೆ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ ಆ ಯುವಕನನ್ನು ಅರೆಸ್ಟ್ ಮಾಡಲಾಗಿದೆ.