ಜನಸ್ಪಂದನ ನ್ಯೂಸ್, ರಾಮನಗರ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಊಜಗಲ್ಲು ಬೆಟ್ಟದಲ್ಲಿ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ನಡೆದಿದೆ.
ಉಮೇಶ್ ಎಂಬಾತ ತನ್ನ ಪತ್ನಿ ದಿವ್ಯಾಳನ್ನು (32) ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ; ಇಲ್ಲಿದೆ ಡೈರೆಕ್ಟ್ link.!
ದಿವ್ಯಾ ಹಾಗೂ ಉಮೇಶ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆಯಲು ಮುಂದಾಗಿದ್ದರಂತೆ. ಅಲ್ಲದೇ ಆಕೆಯ ಶೀಲದ ಬಗ್ಗೆ ಉಮೇಶ್ ಯಾವಾಗಲೂ ಅನುಮಾನಪಡುತ್ತಿದ್ದ.. ಇದೇ ವಿಚಾರ ಮುಂದಿಟ್ಟುಕೊಂಡು ಆತ ದಿವ್ಯಾಗೆ ಸದಾ ಕಿರುಕುಳ ನೀಡುತ್ತಿದ್ದ. ಹೀಗಾಗಿ ದಿವ್ಯಾ ಡಿವೋರ್ಸ್ ಪಡೆಯಲು ಮುಂದಾಗಿದ್ದರು.
ಈ ಸಂಬಂಧ ನಿನ್ನೆ ಮಾಗಡಿ ಕೋರ್ಟ್ ಗೆ ದಂಪತಿ ಹಾಜರಾಗಿದ್ದರು ಎನ್ನಲಾಗಿದೆ.
ಆದರೆ ಆ ಬಳಿಕ ಆರೋಪಿ ಉಮೇಶ್ ನಾಟಕವಾಡಿ ಕೊನೆಯ ಬಾರಿಗೆ ನನ್ನ ಜೊತೆ ದೇವಸ್ಥಾನಕ್ಕೆ ಬಾ ಅಂತ ಪತ್ನಿಯನ್ನ ಕರೆದುಕೊಂಡು ಹೋಗಿದ್ದನಂತೆ.
ಅಂತೆಯೇ ಊಜಗಲ್ಲು ಬೆಟ್ಟಕ್ಕೆ ಕರೆದುಕೊಂಡು ಹೋದ ವೇಳೆ ತನ್ನ ಸ್ನೇಹಿತನೊಂದಿಗೆ ಸೇರಿ ದಿವ್ಯಾಳನ್ನು ಕೊಲೆಗೈದಿದ್ದಾರೆ. ದಿವ್ಯಾ ಹತ್ಯೆ ಬಳಿಕ ಮೃತದೇಹವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ : Special news : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ಮಬಾರದು ಏಕೆ.? ಇಲ್ಲಿದೆ ವೈಜ್ಞಾನಿಕ ಕಾರಣ.
ಘಟನೆ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪತಿ ಉಮೇಶ್ ಉಮೇಶ್ ಸೇರಿ ಮತ್ತೋರ್ವ ಆರೋಪಿಗಾಗಿ ಪೊಲೀರು ತಲಾಶ್ ನಡೆಸಿದ್ದಾರೆ.
ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.