ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ತನ್ನ ಪತ್ನಿ ಬೇರೆಯವರನ್ನು ಕರೆಸಿಕೊಂಡು ಮುದ್ದಾಡಿದ ವಿಡಿಯೋವನ್ನು ರಿವೀಲ್ ಮಾಡಿ, ಹುಟ್ಟಲಿರುವ ಮಗು ನನ್ನದಲ್ಲ ಎಂದು ಘೋಷಣೆ ಮಾಡಿ, ಮಡದಿಯ ಮೋಸದಾಟವನ್ನು ಬಯಲು ಮಾಡಿದ ಘಟನೆ ನಡೆದಿದೆ.
ಗಂಡ, ಪತ್ನಿಯ ಅನೈತಿಕ ಸಂಬಂಧ ಹೊಂದಿರುವ ವಿಷಯ ತಿಳಿಯುತ್ತಲೇ ಹಂತ ಹಂತವಾಗಿ ಪತ್ನಿಯ ಎಂಎಂಎಸ್ ಸೇರಿದಂತೆ ಹಲವು ಸಾಕ್ಷಿಗಳನ್ನು ಸಂಗ್ರಹ ಮಾಡಲು ಶುರು ಮಾಡಿದ್ದಾನೆ.
ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?
ಇನ್ನೂ ಪತ್ನಿ ತನ್ನ ಲವ್ವರ್ ನಿಂದ ಪ್ರೆಗ್ನೆಂಟ್ ಆದ್ರೂ ಗಂಡನಿಗೆ ನಿನ್ನದೇ ಮಗು ಎಂದು ಹೇಳಿದ್ದಳು. ಅಕ್ರಮ ಸಂಬಂಧದ ವಿಷಯ ತಿಳಿದರೂ ಗಂಡ ಸುಮ್ಮನಿದ್ದನು. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಸೀಮಂತ ಕಾರ್ಯಕ್ರಮ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.
ಈ ವೇಳೆ ಪತಿ, ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ವಕೀಲರನ್ನು ಕರೆಸಿಕೊಂಡಿದ್ದನು. ವಕೀಲ ಹಾಗೂ ಸೀಮಂತಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳ ಮುಂದೆ ಮಡದಿಯ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎಂದು ಹೇಳಿದ್ದಾನೆ. ವ್ಯಕ್ತಿಯ ಈ ಮಾತು ಕೇಳಿದ ಅತಿಥಿಗಳೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದರು.
ಇದನ್ನು ಓದಿ : Online ನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ನಿನ್ನ ಹೊಟ್ಟೆಯಲ್ಲಿರುವ ಮಗು ನಿನ್ನ ಗಂಡನದ್ದು ಅಲ್ಲ ಎಂದು ಮಗುವಿನ ಡಿಎನ್‌ಎ ವರದಿಯಲ್ಲಿ ಸಾಬೀತು ಆಗಿದೆ ಎಂದು ವಕೀಲರು ಹೇಳಿದ್ದಾರೆ. ಆದರೆ ಮಳ್ಳಿಯಂತೆ ವರ್ತಿಸುತ್ತಿದ್ದ ಮಹಿಳೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದಾಗ ಲ್ಯಾಪ್‌ಟಾಪ್‌ನಲ್ಲಿ ಬೇರೊಬ್ಬನ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಎಲ್ಲರಿಗೂ ತೋರಿಸಿದ್ದಾರೆ.
ಇದನ್ನು ನೋಡುತ್ತಲೇ ಮಹಿಳೆ ಶಾಕ್ ಆಗಿದ್ದಳು. ಪ್ರೇಯಸಿ ಸೀಮಂತಕ್ಕೆ ಆಕೆಯ ಗೆಳೆಯ ಬಂದಿದ್ದನು. ವಿಡಿಯೋ ನೋಡುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಮಹಿಳೆಯ ಪತಿ ಆತನನ್ನು ಹಿಡಿದು ಎಲ್ಲರ ಮುಂದೆ ನಿಲ್ಲಿಸಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತ್ನಿಯ ಪ್ರಿಯಕರನನ್ನ ಹಿಡಿದು ಧರ್ಮದೇಟು ನೀಡಿದ್ದಾರೆ. ಇತ್ತ ಮಹಿಳೆ ಕುಟುಂಬಸ್ಥರಿಗೆ ಸ್ಪಷ್ಟನೆ ನೀಡಲು ಪ್ರಯತ್ನಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.
ಧರ್ಮದೇಟು ತಿನ್ನುತ್ತಲೇ ಪ್ರಿಯಕರ ಅಲ್ಲಿಂದ ಓಡಿ ಹೋಗಿದ್ದಾನೆ. ಇತ್ತ ವ್ಯಕ್ತಿ ಡಿವೋರ್ಸ್ ನೀಡುವುದಾಗಿ ಘೋಷಿಸಿ ಮಡದಿ ಜೊತೆಗಿನ ಸಂಬಂಧಗಳನ್ನು ಮುರಿದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಈ ವಿಡಿಯೋ ವೈರಲ್ ಆಗಿದ್ದು, 19 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 73 ಸಾವಿರಕ್ಕೂ ಅಧಿಕ ಕಮೆಂಟ್ ಬಂದಿವೆ.
Husband provides proof that the child is not his during baby shower in front of everyone, including the man she cheated with pic.twitter.com/nXDRKXfRhW
— Crazy Clips (@crazyclipsonly) August 23, 2024