ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಕೆಂಗೇರಿಯಲ್ಲಿ ಹೆಂಡತಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಯುವತಿಯನ್ನು ಗಂಡನೇ ಭೀಕರವಾಗಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಘಟನೆ ನಡೆದಿದೆ.
ಇದನ್ನು ಓದಿ : BSNL : ಗ್ರಾಹಕರ ಮನಗೆದ್ದ 197 ರೂ. ಪ್ಲ್ಯಾನ್; ಉಚಿತ ಕರೆ, ದಿನವೂ 2GB ಡೇಟಾ.!
ಕೊಲೆಯಾದ ಯುವತಿ ನವ್ಯಾ (25) ಎಂದು ತಿಳಿದು ಬಂದಿದೆ.
ಪತಿ ಕಿರಣ್ ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು, ನೀನು ಯಾರೊಂದಿಗೆ ಅನೈತಿಕ ಸಂಬಂಧವಿದೆ ಹೇಳು ಎಂದು ಕೇಳಿದ್ದಾನೆ. ಬಳಿಕ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಇದನ್ನು ಓದಿ : ತಾನೇ ಮುಂದೆ ನಿಂತು ಪತಿಗೆ 2ನೇ Marriage ಮಾಡಿಸಿದ ಪತ್ನಿ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ.?
ಕಿರಣ್ ಮತ್ತು ನವ್ಯಾ ಕಳೆದ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಿಮಾರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಳು.
ಆದರೆ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಮಯಕ್ಕೆ ಸರಿಯಾಗಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಂಡ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನು. ಇಬ್ಬರ ನಡುವೆಯೂ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು.
ಇದನ್ನು ಓದಿ : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ಶಿವಮೊಗ್ಗ
ಗಂಡ ಕಿರಣ್ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಲೇ ಇದ್ದನು. ಗಂಡನಿಗೆ ಎಷ್ಟೇ ತಿಳಿ ಹೇಳಿದರೂ, ಆತ ತನ್ನ ವಿಚಾರವನ್ನು ಬದಲಾಯಿಸಿರಲಿಲ್ಲ.
ಪ್ರೀತಿಸಿ ಮದುವೆ ಮಾಡಿಕೊಂಡ ಗಂಡನೇ ಈಗ ತನ್ನ ಮೇಲೆ ಅನುಮಾನ ಪಡುತ್ತಿದ್ದರೂ ಸಹಿಸಿಕೊಂಡು ಹೋಗುತ್ತಿದ್ದಳು. ಆದರೆ, ಈಗ ಗಂಡನಿಂದಲೇ ಭೀಕರವಾಗಿ, ಚಿತ್ರಹಿಂಸೆ ಅನುಭವಿಸಿ ಪ್ರಾಣ ಬಿಟ್ಟಿದ್ದಾಳೆ.
ಇದನ್ನು ಓದಿ : ಮದುವೆಯಾಗಲು ನಿರಾಕರಿಸಿದ Police ಕಾನ್ಸ್‌ಟೇಬಲ್; ಮುಂದೆ ನಡೆದದ್ದು ಘೋರ.!
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವಳಾದ ನವ್ಯಾ ಕಿರಣ್‌ನನ್ನು ಪ್ರೀತಿಸಿ ಮದುವೆಯಾದ ನಂತರ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಗಂಡ ಕಿರಣ್ ಚಿಕ್ಕಬಳ್ಳಾಪುರ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ವಿಷಯ ತಿಳಿದು ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪತ್ನಿ ನವ್ಯಾಳನ್ನು ಕೊಲೆ ಮಾಡಿ ಪರಾರಿ ಆಗಿದ್ದ ಕಿರಣ್‌ನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.