ಜನಸ್ಪಂದನ ನ್ಯೂಸ್, ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ ಪತ್ನಿ ಹಾಗೂ ಈಕೆಯ ಪ್ರಿಯಕರನನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೈಟ್‌ಫೀಲ್ಡ್‌ನ ಹಗದೂರು ನಿವಾಸಿ ಮಹೇಶ್ (36) ಕೊಲೆಯಾದ ವ್ಯಕ್ತಿ. ಈ ಸಂಬಂಧ ಆತನ ಪತ್ನಿ ತೇಜಸ್ವಿನಿ ಮತ್ತು ಈಕೆಯ ಪ್ರಿಯಕರ ಗಜೇಂದ್ರ (35) ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನು ಓದಿ : ಮಹಿಳೆಯ ವಿರುದ್ಧವೂ POCSO ಕೇಸ್ ದಾಖಲಿಸಬಹುದು: ಹೈಕೋರ್ಟ್.!
ಈ ಬಗ್ಗೆ ಪೊಲೀಸರು, ಆರೋಪಿಗಳು ಆ. 9ರಂದು ಸಂಜೆ ಮಹೇಶ್‌ನನ್ನು ಕತ್ತು ಹಿಸುಕಿ ಕೊಲೆಗೈದಿದ್ದರು ಎಂದು ತಿಳಿದು ಬಂದಿದೆ.
ಹಾಸನದ ಅರಕಲಗೂಡಿನ ದೊಂಬರಪಾಳ್ಯ ನಿವಾಸಿ ಮಹೇಶ್ ಮತ್ತು ತೇಜಸ್ವಿನಿ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಬಳೊಕ ವೈಟ್‌ಫೀಲ್ಡ್‌ನ ಹಗದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇದನ್ನು ಓದಿ : ಊರ ಹಬ್ಬದಲ್ಲಿ ಅರೆನಗ್ನಾವತಾರದಲ್ಲಿ ಕಾಣಿಸಿಕೊಂಡ ಖ್ಯಾತ ಗಾಯಕಿ; ವಿಡಿಯೋ Viral.!
ಮಹೇಶ್, ಆಟೋ ಚಾಲಕನಾಗಿದ್ದು, ರಂಗೋಲಿ ಸಹ ಮಾರಾಟ ಮಾಡುತ್ತಿದ್ದರು. ತೇಜಸ್ವಿನಿ, ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.
ಇನ್ನೂ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದರೊಂದಿಗೆ ತೇಜಸ್ವಿನಿ, ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಗಜೇಂದ್ರನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.
ಇದನ್ನು ಓದಿ : Video : ಚೂರಿಯಿಂದ ಹಿಂಸಿಸಿದ ವ್ಯಕ್ತಿ ; ಮುಟ್ಟಿ ನೋಡಿಕೊಳ್ಳುವಂತೆ ಬುದ್ದಿ ಕಲಿಸಿದ ಒಂಟೆ.!
ತೇಜಸ್ವಿನಿ ಮತ್ತು ಗಜೇಂದ್ರ ಮನೆಯಲ್ಲಿ ಒಟ್ಟಿಗೆ ಇದ್ದರು. ಇದೇ ವೇಳೆ ಮಹೇಶ್ ಮನೆಗೆ ಬಂದಿದ್ದು, ಪತ್ನಿ ಜತೆ ಗಜೇಂದ್ರನ ಕಂಡ ಮಹೇಶ್, ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಆಗ ಪತ್ನಿ ತೇಜಸ್ವಿನಿ ಮತ್ತು ಆಕೆಯ ಪ್ರಿಯಕರ ಗಜೇಂದ್ರ ಸೇರಿ ಮಹೇಶ್ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಗೈದಿದ್ದರು ಎಂದು ತಿಳಿದು ಬಂದಿದೆ.
ಬಳಿಕ ಮನೆಯಲ್ಲಿ ತನ್ನ ಗಂಡ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪತ್ನಿ ತೇಜಸ್ವಿನಿ ಪೊಲೀಸರ ಮುಂದೆ ನಾಟಕವಾಡಿದ್ದಳು. ಆದರೆ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನು ಓದಿ : CM ನಿವಾಸದ ಎದುರು ಅಪ್ಪಿಕೊಂಡು ಲಿಪ್ ಕಿಸ್ ಮಾಡಿದ ಜೋಡಿ ; ವಿಡಿಯೋ Viral.!
ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಳು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.