ಜನಸ್ಪಂದನ ನ್ಯೂಸ್, ಬೆಂಗಳೂರು : ಉದ್ಯಮಿಗಳ ಸ್ವರ್ಗ ಹೆಸರು ಪಡೆದು, ಗ್ರೀನ್ ಸಿಟಿಯಾಗಿದ್ದ ಬೆಂಗಳೂರು ಬಳಿಕ ಸಿಲಿಕಾನ್ ಸಿಟಿಯಾಗಿ ಬದಲಾಯಿತು. ಇದೀಗ ಭಾರತದ ಟೆಕ್ ರಾಜಧಾನಿ ಎನ್ನುವ ಹೆಸರು ಸಹ ಬೆಂಗಳೂರಿನದ್ದಾಗಿದೆ. ನಿರೀಕ್ಷೆಗೂ ಮೀರಿ ಮಹಾನಗರಿ ಬೆಳೆದು ನಿಂತಿದೆ.
ಆದರೆ ಇದೇ ನಗರ 1995ರಲ್ಲಿ ಹೇಗಿತ್ತು ಗೊತ್ತಾ?
ಕೇವಲ 30 ವರ್ಷಗಳಲ್ಲಿ ಈ ನಗರ ಅದ್ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ನೀವು ನೋಡಿದರೆ ಅಚ್ಚರಿ ಪಡುವದಂತು ಗ್ಯಾರಂಟಿ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಬೆಂಗಳೂರು ನಗರದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ವಿಡಿಯೋಗಳು ಇದೀಗ ಭಾರಿ ಸುದ್ದಿ ಮಾಡುತ್ತಿದೆ.
ವಿಡಿಯೋ ನೋಡಿದ ಅನೇಕರು ಇಂದಿನ ಬೆಂಗಳೂರಿಗೂ ಅಂದಿನ ಬೆಂಗಳೂರಿಗೂ ಸಂಬಂಧವೇ ಇಲ್ಲದಂತೆ ಬೆಳೆದಿದೆ ಎಂದಿದ್ದಾರೆ. ಇನ್ನೂ ಕೆಲವರು ತಾವು ಬೆಂಗಳೂರಿನ ಹಳೆಯ ದಿನಗಳನ್ನು ಕಣ್ಣಾರೆ ನೋಡಿದ್ದೇನೆ, ಅದು ಬೆಂಗಳೂರಿನ ಚಿನ್ನದಂತಹ ಕಾಲ ಎಂದು ಹೇಳಿದ್ದಾರೆ. ವಿಡಿಯೋ ನೋಡಿದ ಅನೇಕ ಹಿರಿಯರು ಅಂದಿನ ಕಾಲವೇ ಚನ್ನಾಗಿತ್ತು. ಬೆಂಗಳೂರು ಕೂಡ ಸುಂದರವಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಇದನ್ನು ಓದಿ : IBPS : 4,455 ಬ್ಯಾಂಕ್ ಪಿಒ, ಎಂಟಿ ಹುದ್ದೆಗಳ ಅರ್ಜಿಗೆ ಕೊನೆ ದಿನಾಂಕ ವಿಸ್ತರಣೆ ; ಇಲ್ಲಿದೆ ಮಾಹಿತಿ.!
@Bnglrweatherman ಎನ್ನುವ ಎಕ್ಸ್ ಹ್ಯಾಂಡಲ್‌ನಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಎರಡು ವಿಡಿಯೋಗಳಿಂದ 20 ನಿಮಿಷ ಸುದೀರ್ಘವಾದ ವಿಡಿಯೋಗಳಾಗಿದೆ.
ಬೆಂಗಳೂರಿನ ವಿಶಾಲವಾದ ರಸ್ತೆಗಳು, ಕೆಂಪು ಬಸ್‌ಗಳು, ಹಳೆಯ ಕಾರುಗಳು, ಆಟೋಗಳು, ಟ್ರಾಫಿಕ್ ಇಲ್ಲದ ರಸ್ತೆಗಳನ್ನು ನೋಡಬಹುದು. ಅಲ್ಲದೇ. ವಿಧಾನಸೌಧ, ಹೈಕೋರ್ಟ್ ಕಟ್ಟಡಗಳು ಸೇರಿ ಬೆಂಗಳೂರಿನ ವಿವಿಧ ಕಟ್ಟಡಗಳನ್ನು ನೋಡಬಹುದು.
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
ಅಮೂಲ್ಯವಾದ ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಅಂದು ಎಲ್ಲೆಂದರಲ್ಲಿ ಫ್ರೀಯಾಗಿ ಓಡಾಡಿಕೊಂಡು ಇರಬಹುದಿತ್ತು, ಬೆಂಗಳೂರು ಬುಸಿನೆಸ್ ಜಿಲ್ಲೆಯನ್ನು 10 ನಿಮಿಷಗಳಲ್ಲಿ ಓಡಾಡಿಕೊಂಡು ಬರಬಹುದಿತ್ತು ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಕ್ಯಾಪ್ಟನ್ ಮಣಿವಣ್ಣನ್ ಕಮೆಂಟ್ ಮಾಡಿದ್ದಾರೆ.
2004-05ರಲ್ಲಿ ಬೆಂಗಳೂರಿನ ಸುವರ್ಣ ಯುಗ ಮುಕ್ತಾಯವಾಯಿತು. ಅಂದಿನಿಂದ ನಗರ ವೇಗವಾಗಿ ಬೆಳೆದಿದ್ದು, ಇಂದು ನಗರದ ಚಿತ್ರಣವೇ ಬದಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
A US born person filmed this video of Bengaluru city in 1995 when he used to spend his summer vacations in India
The good old days of Bangalore 🤌🫰🫶🤩❤️
VC: Jaynarbmw pic.twitter.com/1qh50Pfd0y
— Karnataka Weather (@Bnglrweatherman) August 23, 2024