ಜನಸ್ಪಂದನ ನ್ಯೂಸ್, ಡೆಸ್ಕ್ : ನೋಡಲು ಅತಿ ಸುಂದರವಾದ ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಇನ್ನೂ ನವಿಲು ಗರಿಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟು ನೋಡಿದಾಗ ಅದು ಹೇಗೆ ಕಾಣಿಸುತ್ತದೆ ಗೊತ್ತಾ.?
ಮೆಲನಿನ್ ಮತ್ತು ಗಾಳಿಯ ಮಿಶ್ರಣದಿಂದ ರಚಿಸಾದ ನವಿಲು ಗರಿ ಮಳೆಬಿಲ್ಲಿನಂತೆ ಗೋಚರಿಸುತ್ತಿದೆ. ಕಾಮನಬಿಲ್ಲಿನ ಬಣ್ಣಗಳ ಸಂಯೋಜನೆಯಿಂದ ಈ ಗರಿ ಅದ್ಬುತವಾಗಿ ಕಾಣುತ್ತಿದೆ.
ಇದನ್ನು ಓದಿ : ಫೋನ್‌ನಲ್ಲಿ ಈ ಸೂಚನೆಗಳು ಕಂಡುಬಂದ್ರೆ ನಿಮ್ಮ phone hack ಆಗಿದೆ ಎಂದರ್ಥ.!
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಮೈಕ್ರೋಬಯಾಲಜಿಸ್ಟ್ ಮತ್ತು Instagram ಬಳಕೆದಾರ Chloé Savard ತನ್ನ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೈಕ್ರೋಬಯಾಲಜಿಸ್ಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಈ ವಿಡಿಯೋದಲ್ಲಿ ಅವರು ಸೂಕ್ಷ್ಮದರ್ಶಕದ ಅಡಿಯಲ್ಲಿ ನವಿಲು ಗರಿಗಳು ಹೇಗೆ ಕಾಣುತ್ತವೆ ಎಂಬುದನ್ನು ತೋರಿಸಿದ್ದಾರೆ.
ಇದನ್ನು ಓದಿ : ಕಾಗೆಯ ಜೊತೆ ನಾಯಿಯ ಫ್ರೆಂಡ್ ಶಿಪ್ ; Video ನೋಡಿದ್ರೆ ಸೂಪರ್ ಅಂತೀರಾ.!
ಮೆಲನಿನ್‌ನಿಂದ ಸಮೃದ್ಧವಾಗಿರುವ ನವಿಲು ಗರಿಗಳು ಬೆಳಕು ಮತ್ತು ಕೆರಾಟಿನ್‌ನಲ್ಲಿ ಕಂಡುಬರುವ ಗಾಳಿಯ ಸಂಯೋಜನೆಯಿಂದ ಮಳೆಬಿಲ್ಲನ್ನು ಹೋಲುವ ಅದ್ಭುತ ದೃಶ್ಯಾವಳಿಯನ್ನು ಸೃಷ್ಟಿಸುತ್ತದೆ.
ಹೆಣ್ಣುಗಳನ್ನು ಆಕರ್ಷಿಸಲು ಗಂಡು ನವಿಲುಗಳು ತಮ್ಮ ಸುಂದರವಾದ ಬಣ್ಣದ ಗರಿಗಳನ್ನು ಬಳಸುತ್ತವೆ. ಕಣ್ಣಿನ ರೂಪ ಹೊಂದಿರುವ ನವಿಲು ಗರಿಗಳು ಬಣ್ಣ ಮತ್ತು ಹೊಳಪಿನ ವ್ಯತಿರಿಕ್ತತತೆಯಿಂದ ಸಂಗಾತಿಯನ್ನು ಆಕರ್ಷಿಸುವಲ್ಲಿ ಪ್ರಮುಕ ಪಾತ್ರ ವಹಿಸುತ್ತದೆ. ಎಂದು ಮೈಕ್ರೋಬಯಾಲಜಿಸ್ಟ್ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!
ಅಮ್ಮನ ಅಪಾರ್ಟ್ಮೆಂಟ್ ನಲ್ಲಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಗರಿಯು ಸಿಕ್ಕಿತು. ಮೈಕ್ರೋಸ್ಕೋಪ್‌ನ ಅಡಿಯಲ್ಲಿಟ್ಟು ಈ ಅದ್ಭುತ ನವಿಲು ಗರಿಯ ಸುಮಾರು 120 ಚಿತ್ರಗಳನ್ನು ತೆಗೆದಿದ್ದೇನೆ ಎಂದು ಬರೆದಕೊಂಡಿದ್ದಾರೆ.
ಇನ್ನೂ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆಗಳನ್ನು ಪಡೆದಿದ್ದು, 85 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಹಲವು ನೆಟ್ಟಿಗರು ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram