ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನ್ಮರಣ ಹೋರಾಟ (Life and death struggle) ನಡೆಸುತ್ತಿರುವ ವ್ಯಕ್ತಿಗಾಗಿ ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಅಲ್ಲದೇ ಒಂದು ಕಿಲೋಮೀಟರ್ ಮುಂದೆ ಸಾಗುವ ಚಾಲಕರನ್ನು ಎಚ್ಚರಿಸಲು (To warn drivers) ಆಂಬ್ಯುಲೆನ್ಸ್ ವಾಹನಗಳಲ್ಲಿ ಸೈರನ್ ಅಳವಡಿಸಲಾಗಿದೆ.
ಈ ಶಬ್ದವನ್ನು ಕೇಳಿದ ತಕ್ಷಣ ಮುಂದೆ ಸಾಗುತ್ತಿರುವ ವಾಹನ ಸವಾರರು ಆಂಬ್ಯುಲೆನ್ಸ್‌ಗೆ ದಾರಿ ಬಿಡಬೇಕು ಎನ್ನುವುದು ನಿಯಮ.
ಇದನ್ನು ಓದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!
ಆದರೆ ಇಲ್ಲೊಬ್ಬ ವೈದ್ಯ ಆಂಬ್ಯುಲೆನ್ಸ್‌ಗೆ ದಾರಿ ಬಿಡದೇ ಕಾರು ಡ್ರೈವ್ ಮಾಡಿಕೊಂಡು ಮುಂದೆ ಸಾಗುತ್ತಿರುವ ವಿಡಿಯೋ (A video of a car driving ahead without giving way to an ambulance) ವಿವಾದಕ್ಕೆ ಕಾರಣವಾಗಿದೆ.
ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಕಾರು ಚಲಾಯಿಸಿಕೊಂಡು ಹೋದ ವೈದ್ಯನಿಗೆ ದಂಡ ವಿಧಿಸಿದ ಘಟನೆ ಕೇರಳದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಈಗ ಹೇಗಿದ್ದಾರೆ ನೋಡಿ ಅಂದಿನ ಕರ್ನಾಟಕದ ಖಡಕ್ Police ಅಧಿಕಾರಿ ಸಾಂಗ್ಲಿಯಾನ.!
ಕೇರಳದ ಕಣ್ಣೂರು (Kannur in Kerala) ಪ್ರದೇಶದಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡದ ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಂಡವನ್ನು (penalty) ವಿಧಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋದಲ್ಲಿರುವ ದೃಶ್ಯ :
ಆಂಬ್ಯುಲೆನ್ಸ್ ರೋಗಿಯನ್ನು ಹೊತ್ತು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದೆ. ಆಗ ಆಂಬ್ಯುಲೆನ್ಸ್ ನ ಮುಂದೆ ಕಾರೊಂದು ಸಾಗುತ್ತಿದೆ. ಆಂಬ್ಯುಲೆನ್ಸ್ ಬರುತ್ತಿರುವುದನ್ನು ಕಂಡರೂ, ಸೈರನ್ ಶಬ್ದ ಮಾಡಿದರೂ ಕಾರು ಚಾಲಕ ದಾರಿ ಬಿಟ್ಟುಕೊಟ್ಟಿಲ್ಲ (The car driver did not give way despite the sound of the siren). ಆಂಬ್ಯುಲೆನ್ಸ್ ವಾಹನಕ್ಕೆ ದಾರಿ ಬಿಡದೇ ಕಾರು ಬಹಳ ದೂರ ಚಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಕುಂಭಮೇಳ Special ರೈಲುಗಳು : ಬೆಳಗಾವಿ, ಘಟಪ್ರಭಾ, ಸಾಂಗ್ಲಿ ಮೂಲಕ ಸಂಚಾರ.!
ಈ ವಿಡಿಯೋ ವೈರಲ್ ಬಳಿಕ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ದಂಡ ವಿಧಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಎಕ್ಸ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು ಕೇರಳದಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡದ ಕಾರಿಗೆ 2.5 ಲಕ್ಷ ರೂ. ದಂಡ ವಿಧಿಸಲಾಗಿದ್ದು (2.5 lakh Rs. impose fine), ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದುಗೊಳಿಸಲಾಗಿದೆ (cancel) ಎಂದು ತಿಳಿಸಿದ್ದಾರೆ.
ವಿಡಿಯೋ ನೋಡಿ :
Such an insane & inhuman act.
A car owner in Kerala has been fined Rs/- 2.5 Lakh and their license has been cancelled for not giving away the path for an ambulance.
Well done @TheKeralaPolice pic.twitter.com/RYGqtKj7jZ
— Vije (@vijeshetty) November 16, 2024
ಹಿಂದಿನ ಸುದ್ದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!
ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ ಎಂದರೆ ಅದು ಕುಂಬಳಕಾಯಿ (Pumpkin). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.
ಇದನ್ನು ಓದಿ : Mahakumbha ಮೇಳದಲ್ಲಿ ಭಾರೀ ಅಗ್ನಿ ಅವಘಡ ; ಹೊತ್ತಿ ಉರಿಯುತ್ತಿರುವ ಟೆಂಟ್‌ಗಳು.!
ಕುಂಬಳಕಾಯಿ ಬಳಸಿ ಅಡುಗೆ ಮಾಡುವಾಗ ಬಹಳಷ್ಟು ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ.
ಇದನ್ನು ಓದಿ : Health : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?
* ರಂಜಕ, ಮೆಗ್ನೀಸಿಯಮ್ ಮತ್ತು ಸತುವನ್ನು (phosphorus, Magnesium and zinc) ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ ಬೀಜಗಳು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯಕವಾಗಿವೆ.
* ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ (Controls hungry and weight). ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿ : Central Board of Secondary Education ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
* ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುವುದು.
ಕುಂಬಳಕಾಯಿ ಬೀಜಗಳಲ್ಲಿನ ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.
ಇದನ್ನು ಓದಿ : ಬೇರೊಬ್ಬನೊಂದಿಗೆ ತೆರಳುತ್ತಿದ್ದ ಪತ್ನಿ ; ಕಾರಿನ ಬಾನೆಟ್ ಮೇಲೆ ನೇತಾಡಿ ರೆಡ್ ಹ್ಯಾಂಡ್ಆಗಿ ಹಿಡಿದ ಪತಿ.!
* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.
* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ (Work against free radicals) ಮಾಡುತ್ತವೆ.
* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನು ಓದಿ : ಪಾರ್ಕ್‌ನ ತೂಗುಯ್ಯಾಲೆ ಸ್ಥಗಿತ : ತಲೆಕೆಳಗಾಗಿ ನೇತಾಡಿದ ಜನ ; ಮುಂದೆನಾಯ್ತು? ಈ Video ನೋಡಿ.!
* ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ (LDL), ಉರಿಯೂತವನ್ನು ಕಡಿಮೆ ಮಾಡುತ್ತವೆ.
* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಗುಣ (Anti- inflammatory properties) ಹೊಂದಿದೆ.
* ಕುಂಬಳಕಾಯಿ ಬೀಜವು ಕಬ್ಬಿಣ, ಸೆಲೆನಿಯಂ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidant) ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಬಳಿಕ ; ತೂಕ ಇಳಿಕೆಗೆ ಯಾವ ನಡಿಗೆ ಪರಿಣಾಮಕಾರಿ.?
* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.
* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದಿಂದಾಗುವ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).
* ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ (Lower sugar levels) ಎನ್ನಲಾಗಿದೆ.
ಇದನ್ನು ಓದಿ : ಇನ್ಮುಂದೆ BPL ಕಾರ್ಡ್ ಹೊಂದಿದ ಕುಟುಂಬಗಳಿಗೆ CT Scan ಮತ್ತು MRI ಸ್ಕ್ಯಾನಿಂಗ್ ಸೇವೆ Free Free.!
* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ಕಬ್ಬಿಣವು ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಇನ್ನೂ ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜಗಳು ಕ್ಯಾನ್ಸರ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು (positive effects) ಬೀರುತ್ತವೆ ಎಂಬ ಅಂಶವನ್ನು ಅಧ್ಯಯನಗಳು ಕಂಡು ಹಿಡಿದಿವೆ