ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ವೈದ್ಯರು ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.
ಆದರೆ ಅತಿಯಾದ ಉಪ್ಪು ಯಾರಿಗಾದರೂ ಗಂಭೀರವಾದ ಹಾನಿಯನ್ನುಂಟು ಮಾಡಬಹುದು. ಹಾಗಂತ ಕಡಿಮೆ ಉಪ್ಪನ್ನು ತಿನ್ನುವುದರಿಂದಲೂ ಸಹ ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
* ಕಡಿಮೆ ಉಪ್ಪನ್ನು ತಿನ್ನುವ ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೆನಿನ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಹೊಂದಿರುತ್ತಾರೆ.
ಆರೋಗ್ಯವಂತ ವ್ಯಕ್ತಿಗಳಲ್ಲಿ ಕಡಿಮೆ ಸೋಡಿಯಂ ಆಹಾರವು ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಶೇ. 4.6 ಮತ್ತು ಟ್ರೈಗ್ಲಿಸರೈಡ್ಗಳನ್ನು ಶೇ. 5.9 ರಷ್ಟು ಹೆಚ್ಚಿಸಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.
ಇದನ್ನು ಓದಿ : ಬೇಟೆಯಾಡಲು ಗೋಡೆ ಏರಿದ ದೈತ್ಯ ಹೆಬ್ಬಾವು ; Video ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ.!
* ಹೃದಯ ಮತ್ತು ರಕ್ತಕ್ಕೆ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ ಉಂಟಾಗುತ್ತದೆ. ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇದರ ಅರ್ಥವಲ್ಲ. ಆದರೆ ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ.
ರಾಡ್ ಎಸ್. ಟೇಲರ್ ಮತ್ತು ಸಹೋದ್ಯೋಗಿಗಳ ಸಂಶೋಧನೆಯು (research), ಹೃದಯ ವೈಫಲ್ಯ ಹೊಂದಿರುವ ಜನರು ಕಡಿಮೆ ಸೋಡಿಯಂ ಸೇವನೆಯಿಂದ ಸಾಯುವ ಅಪಾಯವನ್ನು ಸೂಚಿಸುತ್ತದೆ.
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
* ಕಡಿಮೆ ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಜ. ಅದಾಗ್ಯೂ, ಅಧಿಕ ರಕ್ತದೊತ್ತಡಕ್ಕೆ ಉಪ್ಪು ಮಾತ್ರ ಕಾರಣವಲ್ಲ. ಅಧ್ಯಯನದ ಪ್ರಕಾರ, ದಿನಕ್ಕೆ 2,000 ಮಿಗ್ರಾಂ ಗಿಂತ ಕಡಿಮೆ ಸೋಡಿಯಂ ತೆಗೆದುಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗದಿಂದ ಸಾಯುವ ಅಪಾಯ ಹೆಚ್ಚಾಗುತ್ತದೆ.
* ಕಡಿಮೆ ಉಪ್ಪನ್ನು ತಿನ್ನುವುದರಿಂದ ಹೈಪೋನಾಟ್ರೀಮಿಯಾದ ಅಪಾಯ ಹೆಚ್ಚಾಗುತ್ತದೆ. ಈ ಹೈಪೋನಾಟ್ರೀಮಿಯಾ ಎನ್ನುವುದು ರಕ್ತದಲ್ಲಿ ಕಡಿಮೆ ಮಟ್ಟದ ಸೋಡಿಯಂನಿಂದ ಉಂಟಾಗುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ನಿರ್ಜಲೀಕರಣದಿಂದ ಉಂಟಾಗುವ ಲಕ್ಷಣಗಳನ್ನು ಹೋಲುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಮೆದುಳಿನ ಊತ ಇರಬಹುದು.
ಇದನ್ನು ಓದಿ : Health : ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
* ಉಪ್ಪನ್ನು ಸೇವಿಸದಿದ್ದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಯಾವುದೇ ರೀತಿಯ ನರ ಸಂವಹನವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ದೇಹದಲ್ಲಿ ವಾಕರಿಕೆ, ತಲೆಸುತ್ತು, ನಿರ್ಜಲೀಕರಣದಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಉಪ್ಪನ್ನು ಬಿಡುವ ಬಗ್ಗೆ ಎಂದಿಗೂ ಯೋಚಿಸಬಾರದು
* ದಿನವಿಡೀ ಉಪ್ಪನ್ನು ತಿನ್ನದಿರುವುದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಜೀವಕೋಶಗಳು ಹಾರ್ಮೋನ್ ಇನ್ಸುಲಿನ್ ಸಿಗ್ನಲ್ಗೆ ಪ್ರತಿಕ್ರಿಯಿಸದಿದ್ದಾಗ, ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ.
ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!
* ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವವರು ಕಡಿಮೆ ಸೋಡಿಯಂ ಡಯಟ್ನಿಂದ ಸಾಯುವ ಅಪಾಯವಿದೆ ಎಂದು ಸಂಶೋಧನೆಗಳು ತಿಳಿಸಿವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.