ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ.
ವಿಶೇಷವಾಗಿ ಭಾರತದಲ್ಲಿ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ರೆ, ಒಂದು ಕಾಲದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಸಮಸ್ಯೆಗಳು ಬರುತ್ತಿದ್ದವು.
ಇದನ್ನು ಓದಿ : Special news : ರಾತ್ರಿ ಮೊಸರಿಗೆ ಈರುಳ್ಳಿ ಸೇರಿಸಿ ತಿನ್ನಬಹುದೇ.? ತಿಂದರೆ ಏನಾಗಬಹುದು.!
ಸಾಮಾನ್ಯವಾಗಿ ವ್ಯಕ್ತಿಯು ಅನಾರೋಗ್ಯಕರ ಆಹಾರ, ಅವ್ಯವಸ್ಥೆಯ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಾನೆ.
ಹಾಗಾದರೆ ಈ ಹೃದಯಾಘಾತ ಅನ್ನೋದು ನಮ್ಮ ಬಳಿ ಸುಳಿಯಬಾರದೆಂದರೆ ತಪ್ಪದೇ ಈ 5 ಮಾಡುವುದು ಉತ್ತಮ.
ತೂಕದ ಬಗ್ಗೆ ಗಮನ ಇರಲಿ, ಅತಿಯಾದ ತೂಕ ಫ್ಯಾಟ್ ದೇಹಕ್ಕೆ ಸೇರದಂತೆ ನೋಡಿಕೊಳ್ಳುವುದು ಉತ್ತಮ.
ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!
ವಾಕಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ. ವಾರಕ್ಕೆ ಮೂರು ದಿನವಾದರೂ ತಪ್ಪದೇ 45 ನಿಮಿಷ ವಾಕಿಂಗ್ ಮಾಡಿರಿ.
ಪ್ರೊಸೆಸ್ಡ್ ಆಹಾರ ಇಂದೇ ಬಿಟ್ಟುಬಿಡಬೇಕು. ಬೇಕರಿ, ಬರ್ಗರ್ ಪಿಝಾ ಒಟ್ಟಾರೆ ಮೈದಾ ಹಾಗೂ ಸಕ್ಕರೆ ಇರುವ ಆಹಾರವನ್ನು ತ್ಯಜಿಸಬೇಕು.
ಪ್ರತಿದಿನ ಮಾಡುವ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಬೇಕು. ನಿಮ್ಮ ಮನಸ್ಸಿಗೆ ಬ್ರೇಕ್ ಬೇಕೇ ಬೇಕು.
ಇದನ್ನು ಓದಿ : ಮಾವನ ಮನೆಗೆ ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸರನ್ನೇ ಕರೆಸಿಕೊಂಡ ಭೂಪ.!
ಅತೀ ಒತ್ತಡದ ಕೆಲಸ ನಿಮ್ಮದಾಗಿದ್ದರೆ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಬಗ್ಗೆ ಗಮನಹರಿಸಬೇಕು. ಹಾಗಾಗಿ ಪ್ರತಿದಿನ ಧ್ಯಾನದ ಅಭ್ಯಾಸ ಮಾಡಿಕೊಳ್ಳಿರಿ
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.