ಜನಸ್ಪಂದನ ನ್ಯೂಸ್, ಡೆಸ್ಕ್ : ವಾರದಲ್ಲಿ ಎರಡು ಮೂರು ಬಾರಿಯಾದರೂ ಕೂಡ ವಿವಿಧ ಬಗೆಯ ತರಕಾರಿಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳು ಸಿಗುವುದರ ಜೊತೆಗೆ, ಆರೋಗ್ಯಕಾರಿ ಜೀವನ ನಮ್ಮದಾಗುತ್ತದೆ.
ಅದರಲ್ಲಿಯೂ ಬೆಂಡೆಕಾಯಿಯಲ್ಲಿ ಮೆಗ್ನೀಷಿಯಂ, ವಿಟಮಿನ್ ಎ, ವಿಟಮಿನ್ ಕೆ, ನಾರಿನಾಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುತ್ತದೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹಾಗಾದ್ರೆ ಬೆಂಡೆಕಾಯಿಯಿಂದ ಸಿಗುವ ಆರೋಗ್ಯ ಲಾಭಗಳೇನು ಅಂತ ತಿಳಿಯೋಣ ಬನ್ನಿ.
* ಬೆಂಡೆಕಾಯಿಯನ್ನು ಆಹಾರದಲ್ಲಿ ಬಳಸಿದರೆ ದೇಹಕ್ಕೆ ತಂಪು, ಹೊಟ್ಟೆಯ ಉರಿ, ಗುದದ್ವಾರದ ಉರಿ ಶಾಂತವಾಗುತ್ತದೆ.
* ಬೆಂಡೆ ರಸದ ಲೇಪನದಿಂದ ಚರ್ಮದ ತುರಿಕೆ ವಾಸಿಯಾಗಿ ಕಾಂತಿ ಹೆಚ್ಚುತ್ತದೆ.
* ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ. ಸುಕ್ಕು, ಮೊಡವೆ ಮುಂತಾದವುಗಳು ಬರದಂತೆ ತಡೆಯುತ್ತವೆ.
* ಈ ಗಿಡದ ಬೇರು ಯಕೃತ್ತಿನ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ.
* ಸಿಲ್ಕ್ ಆ್ಯಂಡ್ ಶೈನ್ ಕೂದಲು ಹೊಂದಲು ನೀರಿನಲ್ಲಿ ಬೆಂಡೆಕಾಯಿ ಹಾಕಿ ಕುದಿಸಿ ಬಳಿಕ ಈ ಲೋಳೆಭರಿತ ನೀರಿನಿಂದ ಕೂದಲನ್ನು ತೊಳೆಯಬೇಕು.
* ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ.
ಇದನ್ನು ಓದಿ : ವಿದ್ಯಾಭ್ಯಾಸದಲ್ಲಿ ಹಿನ್ನಡೆ : ಮಕ್ಕಳ ಮೊಬೈಲ್ ಒಡೆದು ಪುಡಿ ಮಾಡಿದ ಪೋಷಕರು ; ವಿಡಿಯೋ viral.!
* ತಲೆ ಚರ್ಮದಲ್ಲಿ ತುರಿಕೆ ಇದ್ರೆ ಅಥವಾ ಕೂದಲು ಡ್ರೈ ಆಗಿದ್ರೆ ಬೆಂಡೆಕಾಯಿ ಬೇಯಿಸಿದ ನೀರಿನಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡಬೇಕು.
* ಬೆಂಡೆಕಾಯಿ ಸೇವಿಸಿದರೆ ಚರ್ಮವೂ ಹೆಚ್ಚು ಹೊಳಪಾಗುತ್ತದೆ.
* ಕೀಲುರೋಗ ಮತ್ತು ಸಂಧಿವಾತ ತಡೆಯಲು ಬೇಕಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವವನ್ನು ಈ ತರಕಾರಿ ಹೊಂದಿದೆ.
* ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.
* ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
* ಎಳೆಯ ಬೆಂಡೆಕಾಯಿಯನ್ನು ಕತ್ತರಿಸಿ ಕಲ್ಲುಸಕ್ಕರೆಯೊಂದಿಗೆ ಸೇವಿಸಿ, ಹಾಲು ಕುಡಿಯಬೇಕು. ಇದರಿಂದ ಲೈಂಗಿಕ ಶಕ್ತಿ ವೃದ್ಧಿಸುತ್ತದೆ.
* ಫ್ರೀ ರಾಡಿಕಲ್ಸ್ ಅನ್ನು ಬೆಂಡೆಯಲ್ಲಿರುವ ಉತ್ಕರ್ಷಣ ಅಂಶ ಹಾನಿಗೊಳಗಾದ ಚರ್ಮವನ್ನು ಸರಿದೂಗಿಸಲು ಸಹಕರಿಸುತ್ತದೆ.
ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!
* ಬೆಂಡೆಕಾಯಿ ದೇಹದಲ್ಲಿನ ಇಮ್ಯುನಿಟಿ ಪವರ್ ಹೆಚ್ಚಿಸುತ್ತದೆ.
* ದೃಷ್ಟಿದೋಷ ನಿವಾರಿಸುವ ಎ ಬೆಂಡೆಯಲ್ಲಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.