ಜನಸ್ಪಂದನ ನ್ಯೂಸ್, ಡೆಸ್ಕ್ : ಆರೋಗ್ಯದ ವಿಚಾರದಲ್ಲಿ ನುಗ್ಗೆ ಕಾಯಿಯ ಮಹತ್ವ ನಿಮಗೆ ಗೊತ್ತಿರಬಹುದು. ಆದರೆ, ನಿಮಗೆ ತಿಳಿದಿರಲಿ, ನುಗ್ಗೆ ಕಾಯಿ ಅಷ್ಟೇ ಅಲ್ಲ. ನುಗ್ಗೆ ಸೊಪ್ಪು ಕೂಡಾ ಆರೋಗ್ಯ ವಿಚಾರದಲ್ಲಿ ಸಂಜೀವಿನಿ
ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪನ್ನು ಬಹಳ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಇನ್ನು ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾದ ಮರ ಇದು. ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ನಂಬಿದ್ದಾರೆ.
ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!
ಒಂದು ಲೋಟ ಹಾಲಿಗೆ 1 ರಿಂದ 9 ಚಮಚ ನುಗ್ಗೆ ಸೊಪ್ಪಿನ ರಸ ಸೇರಿಸಿ ಕುಡಿಯುವುದರಿಂದ ನಿಮ್ಮ ಮೂಳೆಯೂ ಸ್ಟ್ರಾಂಗ್ ಆಗುತ್ತದೆ.
ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು, ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತವು ಶುದ್ಧಿಯಾಗುತ್ತದೆ.
ಸಂಭೋಗದ ಶಕ್ತಿಯು ವೃದ್ಧಿಸಲು ನುಗ್ಗೆ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ರಸ ತೆಗೆದು ಅದಕ್ಕೆ ಅಡಿಗೆ ಉಪ್ಪು ನಿಂಬೆರಸ, ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಗ್ಗೆ ಸೇವಿಸಿರಿ.
ಕೀಲು ನೋವಿರುವ ಜಾಗಕ್ಕೆ ನುಗ್ಗೆಸೊಪ್ಪು, ತುಳಸಿ ಎಲೆಗಳನ್ನು ಹುರಿದು ಶಾಖವನ್ನು ಕೊಟ್ಟರೆ ನೋವು ನಿವಾರಣೆಯಾಗುತ್ತದೆ.
ಇದನ್ನು ಓದಿ : ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್.!
ನುಗ್ಗೆ ಸೊಪ್ಪಿನ ರಸವನ್ನು ಕುದಿಸಿ ಕುಡಿಯುತ್ತಿದ್ದರೆ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.
ನುಗ್ಗೆಸೊಪ್ಪು, ಹೆಚ್ಚಿದ ಶುಂಠಿ, ಹರಳು ಗಿಡದ ಎಲೆ, ತುಳಸಿ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿ ಬೆನ್ನು ನೋವು ಇರುವ ಜಾಗಕ್ಕೆ ಬಿಸಿ ಶಾಖವಿಟ್ಟರೆ ಬೆನ್ನು ನೋವು ಕಡಿಮೆಯಾಗುತ್ತದೆ.
ತಲೆಸುತ್ತುವ ಸಮಸ್ಯೆ ಇದ್ದರೆ ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು ಅದಕ್ಕೆ ನಿಂಬೆರಸ ಹಿಂಡಿ ಒಂದು ವಾರಗಳ ಕಾಲ ಸೇವಿಸಿದರೆ ಒಳ್ಳೆಯದು.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಕ್ಯಾರೆಟ್ ಗಿಂತ ನಾಲ್ಕು ಪಟ್ಟು ಅಧಿಕ ಪ್ರಮಾಣದ ವಿಟಮಿನ್ ಎ ನುಗ್ಗೆ ಸೊಪ್ಪಿನಲ್ಲಿ ಸಿಗುತ್ತದೆ. ಹಾಗಾಗಿ, ನುಗ್ಗೆ ಸೊಪ್ಪು ಕಣ್ಣಿಗೆ ತುಂಬಾ ಒಳ್ಳೆಯದು.
ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ, ಅದಕ್ಕೆ ಬೆಳ್ಳುಳ್ಳಿ ರಸ ಬೆರೆಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ನುಗ್ಗೆ ಸೊಪ್ಪಿನ ಒಂದು ತೊಟ್ಟು ರಸವನ್ನು ಕಿವಿಗೆ ಹಾಕುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ.
ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!
ನುಗ್ಗೆ ಸೊಪ್ಪನ್ನು ನುಣ್ಣಗೆ ರುಬ್ಬಿ ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.