ಜನಸ್ಪಂದನ ನ್ಯೂಸ್, ಡೆಸ್ಕ್ : ಅಮೃತಬಳ್ಳಿ ಒಂದು ಔಷಧೀಯ ಸಸ್ಯ. ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ.
ಈ ಸಸ್ಯದ ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ.
ಹಾಗಾದ್ರೆ ಬನ್ನಿ ಅಮೃತ ಬಳ್ಳಿಯಿಂದ ಏನೇನು ಆರೋಗ್ಯ ಪ್ರಯೋಜನಗಳಿವೆ ಅಂತ ತಿಳಿಯೋಣ.
ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!
* ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಬಯಸುವವರಿಗೆ ಅಮೃತಬಳ್ಳಿ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ.
* ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು. ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.
* ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.
ಇದನ್ನು ಓದಿ : ತಾನೇ ಮುಂದೆ ನಿಂತು ಪತಿಗೆ 2ನೇ Marriage ಮಾಡಿಸಿದ ಪತ್ನಿ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ.?
* ಇದರಲ್ಲಿರುವ ಗುಣಗಳು ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಹೊಂದಿರುವವರು ಆಗಾಗ್ಗೆ ಅಮೃತ ಬಳ್ಳಿಯನ್ನು ಸೇವನೆ ಮಾಡುವುದು ಅಥವಾ ಜ್ಯೂಸ್ ಆಗಿ ಸೇವನೆ ಮಾಡುವುದು ಒಳ್ಳೆಯದು.
* ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ದೀರ್ಘಾವಧಿಯ ಸೆಲ್ಯುಲಾರ್ ಇನ್ಸುಲಿನ್ ಸೂಕ್ಷ್ಮತೆಯನ್ನು ಅಮೃತ ಬಳ್ಳಿಯಲ್ಲಿರುವ ಅಂಶಗಳು ಸುಧಾರಿಸುತ್ತದೆ.
* ಅಮೃತಬಳ್ಳಿಯನ್ನು ಆಗಾಗ ಸೇವಿಸಿದರೆ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಅಲ್ಲದೇ ಕರುಳಿಗೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯುವುದು.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
* ಮಲಬದ್ಧತೆಯಿಂದ ಬಳಲುತ್ತಿರುವವರು ಔಷಧಿಗಳ ಬದಲಾಗಿ ಅಮೃತ ಬಳ್ಳಿಯನ್ನು ಸೇವನೆ ಮಾಡಬೇಕು. ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದ ಜೊತೆ ಸೇರಿಸಿ ಸೇವನೆ ಮಾಡಿ. ಇದರಿಂದಾಗಿ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು
* ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು.
* ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆ ಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.