ಜನಸ್ಪಂದನ ನ್ಯೂಸ್, ಡೆಸ್ಕ್ : ಮೂಗಿನಲ್ಲಿ ಬೆರಳು ಹಾಕುವ ಅಭ್ಯಾಸವು ಒಳ್ಳೆಯದಲ್ಲ. ಹೀಗೆ ಮಾಡುವವರು ಅಷ್ಟು ಸುಲಭವಾಗಿ ಈ ಅಭ್ಯಾಸವನ್ನು ಬಿಡುವುದಿಲ್ಲ. ಆದರೆ ಇದರಿಂದ ಅವರ ಆರೋಗ್ಯಕ್ಕೆ ಹಾನಿಯಾಗುವುದಂತೂ ನಿಜ.
ಪದೇ ಪದೇ ಮೂಗು ತೆಗೆಯುವ ಅಭ್ಯಾಸದಿಂದಾಗಿ ಕೆಲವು ಸೂಕ್ಷ್ಮಜೀವಿಗಳು ಮೂಗಿನೊಳಕ್ಕೆ ಪ್ರವೇಶಿಸಬಹುದು, ಇದು ಮುಂದೆ ಆಲ್‌ಝೈಮರ್‌ನ ಕಾಯಿಲೆಗೆ ಕಾರಣವಾಗಬಹುದು ಎಂದು ವೆಸ್ಟರ್ನ್ ಸಿಡ್ನಿ (Sydney) ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
ಆಗಾಗ ಮೂಗಲ್ಲಿ ಬೆರಳಾಡಿಸುವ ಜನರು ಆಲ್‌ಝೈಮರ್‌ನ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನವು ತಿಳಿಸಿದೆ.
ರೋಗಕಾರಕಗಳು ಮೂಗಿನ ಲೋಳೆ ಮೂಲಕ ಮೆದುಳಿನಲ್ಲಿ ಬೀಟಾ ಅಮಿಲಾಯ್ಡ್ ಉತ್ಪಾದನೆಗೆ ಕಾರಣವಾಗುತ್ತವೆ.
ಇದನ್ನು ಓದಿ : ಈ ಆಹಾರಗಳಿಂದ ದೂರವಿರಿ; ಅತಿಯಾಗಿ ತಿಂದ್ರೆ ಕೀಲುನೋವು ಗ್ಯಾರಂಟಿ.!
ಆಲ್‌ಝೈಮರ್ ಹೆಚ್ಚಳಕ್ಕೆ ಬೀಟಾ ಅಮಿಲಾಯ್ಡ್ ಎಂಬ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆಲ್‌ಝೈಮರ್ ಅಂತಹ ನರ-ಉರಿಯೂತದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ಕ್ಷಣ ಕ್ಷಣಕ್ಕೂ ಮೂಗಿನಲ್ಲಿ ಬೆರಳು ಇಟ್ಟುಕೊಳ್ಳುವುದರಿಂದ ರೋಗವನ್ನು ಉಂಟುಮಾಡುವ ಸೂಕ್ಷ್ಮಾಣು ಜೀವಿಗಳು ಮೂಗಿನ ಮೂಲಕ ಮೆದುಳನ್ನು ಸುಲಭವಾಗಿ ತಲುಪಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ರೋಗಕಾರಕಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಮೂಗಿನ ಕೋಶಗಳಲ್ಲಿ ಹೀರಲ್ಪಡುತ್ತವೆ. ಈ ರೀತಿಯಲ್ಲಿ ಅದು ಅಂತಿಮವಾಗಿ ಮೆದುಳನ್ನು ತಲುಪುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಕೂಡಲೇ ಬಿಟ್ಟು ಬಿಡುವುದು ಒಳ್ಳೆಯದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.