ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆ ಸಡಗರ, ಸಂಭ್ರಮದಿಂದ ನಡೆದರೂ, ವಧುವಿನ ಬೀಳ್ಕೊಡುಗೆ ವೇಳೆ ವರನ ಕಡೆಯವರನ್ನು ಹೊರತುಪಡಿಸಿ ಎಲ್ಲರೂ ಭಾವುಕರಾಗಿ ಕಣ್ಣೀರು ಹಾಕುತ್ತಾರೆ.
ವಧುವಿನ ಅಪ್ಪ-ಅಮ್ಮ, ಸೋದರಿ-ಸೋದರಿ ಸೇರಿದಂತೆ ಎಲ್ಲರೂ ಭಾರವಾದ ಹೃದಯದಿಂದಲೇ ಬೀಳ್ಕೊಡುತ್ತಾರೆ. ವಧು ಸಹ ಅಳುತ್ತಲೇ ತವರು ತೊರೆದು ಗಂಡನ ಮನೆ ಸೇರುತ್ತಾಳೆ.
ಇದನ್ನು ಓದಿ : ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್.!
ಸದ್ಯ ವಧುವಿನ ಬೀಳ್ಕೊಡುಗೆ ಕುರಿತಾದ ಮಜವಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಅಸಲಿ ಮದುವೆಯೋ ಅಥವಾ ರೀಲ್ಸ್‌ಗಾಗಿಯೇ ಈ ರೀತಿ ಮಾಡಲಾಗಿದೆಯಾ ಎಂಬುದರ ಸ್ಪಷ್ಟತೆ ಇಲ್ಲ.
ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ.
ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?
ವೈರಲ್ ವಿಡಿಯೋದ ಆರಂಭದಲ್ಲಿ ಪುಟ್ಟ ಗ್ರಾಮವನ್ನು ನೋಡಬಹುದು. ಹೆತ್ತವರು ಅಳುತ್ತಾ ತಮ್ಮ ಮಗಳನ್ನು ಬೀಳ್ಕೊಡುತ್ತಿರುತ್ತಾರೆ. ವರ ಮುಂದೆ ದೊಡ್ಡದಾದ ರಾಕೆಟ್ ಮೇಲೆ ಕುಳಿತಿರುತ್ತಾನೆ. ಪೋಷಕರು ವಧುವನ್ನು ಅಳುತ್ತಲೇ ವರನ ಬಳಿ ಕರೆದುಕೊಂಡು ಬರುತ್ತಾರೆ.
ನಂತರ ವಧು ಸಹ ವರನ ಹಿಂದೆ ರಾಕೆಟ್ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರ ಹಿಂದಿನಿಂದ ಬರುವ ವ್ಯಕ್ತಿ ರಾಕೆಟ್‌ಗೆ ಬೆಂಕಿ ಹಚ್ಚುತ್ತಾನೆ. ವರ ಮತ್ತು ವಧು ರಾಕೆಟ್‌ನಲ್ಲಿ ಹಾರಿ ಹೋಗುತ್ತಾರೆ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಎಕ್ಸ್ ಪ್ಲಾಟ್‌ಫಾರಂನಲ್ಲಿ @Masterji_UPWale ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ರೀತಿಯೂ ವಧುವನ್ನು ಕರೆದುಕೊಂಡು ಹೋಗಲಾಗುತ್ತೆ ಎಂಬುದರ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.
India is not for beginners 😜 pic.twitter.com/9YX3Ap3yaj
— Professor (@Masterji_UPWale) August 24, 2024