ಜನಸ್ಪಂದನ ನ್ಯೂಸ್, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 575 ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡಲು ಜುಲೈನಲ್ಲಿ ಅಧಿಸೂಚಿಸಿತ್ತು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ ಈ ಲೇಖನದಲ್ಲಿ ಪಡೆಯಬಹುದಾಗಿದೆ.
ಇದನ್ನು ಓದಿ : IBPS : 4,455 ಬ್ಯಾಂಕ್ ಪಿಒ, ಎಂಟಿ ಹುದ್ದೆಗಳ ಅರ್ಜಿಗೆ ಕೊನೆ ದಿನಾಂಕ ವಿಸ್ತರಣೆ ; ಇಲ್ಲಿದೆ ಮಾಹಿತಿ.!
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಖಾಲಿ ಇರುವ ಹುದ್ದೆ ವಿವರ :
ಅಂಗನವಾಡಿ ಕಾರ್ಯಕರ್ತೆ | 127 |
ಅಂಗನವಾಡಿ ಸಹಾಯಕಿ | 448 |
ಅಂಗನವಾಡಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಗಳು :
- ಅಂಗನವಾಡಿ ಕಾರ್ಯಕರ್ತೆ : 12ನೇ ತರಗತಿ/ಡಿಪ್ಲೊಮ ಇಸಿಸಿಇ/ತತ್ಸಮಾನ ಶಿಕ್ಷಣ.
- ಅಂಗನವಾಡಿ ಸಹಾಯಕಿ : 10ನೇ ತರಗತಿ.
ವಯೋಮಿತಿ :
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಈ ವಯಸ್ಸಿನ ಅರ್ಹತೆಗಳು ಅನ್ವಯವಾಗಲಿವೆ.
- ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್ಸಿ/ಎಸ್ಟಿ/ಪ್ರವರ್ಗ-1 ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ.
ಇದನ್ನು ಓದಿ : ದೀನ್ ದಯಾಳ್ ಸ್ಪರ್ಶ್ ಯೋಜನೆ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 6 ಸಾವಿರ ಸ್ಕಾಲರ್ಶಿಪ್.!
ವೇತನ ಶ್ರೇಣಿ :
- ಮಾಸಿಕ Rs.10,000-15,000 ವರೆಗೆ ವೇತನ ನೀಡಲಾಗುತ್ತದೆ.
ಶಿವಮೊಗ್ಗ ಜಿಲ್ಲೆ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ :
- ಡಬ್ಲ್ಯೂಸಿಡಿ ಡಿಪಾರ್ಟ್ಮೆಂಟ್ ವೆಬ್ ವಿಳಾಸ. “karnemakaone.kar.nic.in/abcd/ApplicationForm_JA_org.aspx” ಕ್ಕೆ ಭೇಟಿ ನೀಡಿ.
- ಉದ್ಯೋಗ ಬಯಸುವ ಜಿಲ್ಲೆ ಶಿವಮೊಗ್ಗ ಆಯ್ಕೆ ಮಾಡಿ.
- ನಂತರ ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) >> ಅಧಿಸೂಚನೆ ಸಂಖ್ಯೆ >> ಆಯ್ಕೆ ಮಾಡಿ.
- ಮುಂದಿನ ಹಂತವಾಗಿ ಹುದ್ದೆ ಹೆಸರು ಆಯ್ಕೆ ಮಾಡಿ.
- ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು.
- ಆನ್ಲೈನ್ ಅರ್ಜಿ ನಮೂನೆ ತೆರೆಯುತ್ತದೆ.
- ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ. ಕೇಳಲಾದ ದಾಖಲೆಗಳ ಪಿಡಿಎಫ್ ಫೈಲ್ ಅಪ್ಲೋಡ್ ಮಾಡಿ.
- ಅರ್ಜಿ ಪೂರ್ಣಗೊಳಿಸಿ, ಮುಂದಿನ ರೆಫರೆನ್ಸ್ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸುವಾಗ ಶೈಕ್ಷಣಿಕ ಅರ್ಹತೆಗಳ ವಿವರಗಳು, ದಾಖಲೆಗಳು, ಮೀಸಲಾತಿ ಕೋರುವ ವಿವರಗಳು ಹಾಗೂ ದಾಖಲೆಗಳನ್ನು ನೀಡಿ ಅಪ್ಲೋಡ್ ಮಾಡಬೇಕಾಗುತ್ತದೆ. ಸರ್ಕಾರದಿಂದ ಅಧಿಕೃತವಾಗಿ ಪಡೆದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕಿರುತ್ತದೆ.
ಇದನ್ನು ಓದಿ : ಭಾರತೀಯ ರೈಲ್ವೆ : 11,250 ಟಿಕೆಟ್ ಕಲೆಕ್ಟರ್ಗಳ ನೇಮಕಾತಿ ; ಇಲ್ಲದೆ ಮಾಹಿತಿ.!
ಆಯೆಯ ವಿಧಾನ :
- ಹುದ್ದೆ ಖಾಲಿ ಇರುವ ಅಂಗನವಾಡಿ ವ್ಯಾಪ್ತಿಯನ್ನು ಪರಿಗಣಿಸಿ, ಅರ್ಜಿ ಸಲ್ಲಿಸಿದವರನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.