ಜನಸ್ಪಂದನ ನ್ಯೂಸ್, ಬೆಂಗಳೂರು : ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಒಂದಿದೆ.
ಅದೇನೆಂದರೆ ಭಾರತೀಯ ಸೇನೆಯಲ್ಲಿ ಖಾಲಿ ಇರುವ senior material assistant ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ (recruitment) ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 188 ಹುದ್ದೆಗಳು ಖಾಲಿಯಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : Health : ಈ ಚಳಿಗಾಲದಲ್ಲೂ ಅತಿಯಾಗಿ ಬೆವರುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.
ಹುದ್ದೆಯ ಬಗ್ಗೆ ಮಾಹಿತಿ :
ಇಲಾಖೆಯ ಹೆಸರು : ಭಾರತೀಯ ಸೇನೆ.
ಹುದ್ದೆಗಳ ಹೆಸರು : senior material assistant.
ಹುದ್ದೆಗಳ ಸಂಖ್ಯೆ : 188.
ಉದ್ಯೋಗ ಸ್ಥಳ : ಭಾರತಾದ್ಯಂತ.
ವೇತನ ಶ್ರೇಣಿ ಹಾಗೂ ವಿದ್ಯಾರ್ಹತೆ :
ಡಿಪ್ಲೊಮಾ, ಪದವಿ/ ಸ್ನಾತಕೋತ್ತರ ಪದವಿ (ಅರ್ಥಶಾಸ್ತ್ರ/ ವಾಣಿಜ್ಯ/ ಅಂಕಿಅಂಶ/ ವ್ಯವಹಾರ ಅಧ್ಯಯನ/ ಸಾರ್ವಜನಿಕ ಆಡಳಿತ) (Economics/ Commerce/ Statistics/ Business Studies/ Public Administration)
ನೇಮಕಾತಿ ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳು ರೂ. 35,400/- ರೂ. ಗಳಿಂದ 112,100/- ರೂ. ಗಳವರೆಗೆ ಮಾಸಿಕ ವೇತನ ಪಡೆಯಬಹುದು.
ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!
ಆಯ್ಕೆ ವಿಧಾನ :
ಅಭ್ಯರ್ಥಿಗಳ ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ನವೆಂಬರ್ 1̧1 2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 10, 2025.
ಹಿಂದಿನ ಸುದ್ದಿ ಓದಿ : ಮಾಡೆಲಿಂಗ್ ತೊರೆದು IFS ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಸ್ಪೂರ್ತಿದಾಯಕ ಸ್ಟೋರಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ತಾವು ಕಂಡ ಕನಸಿಗಾಗಿ ಕೆಲವರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಬಿಟ್ಟು ಬಿಡುತ್ತಾರೆ. ಹೀಗೆ ತಮ್ಮ ಮಾಡೆಲಿಂಗ್ (modeling) ಕ್ಷೇತ್ರವನ್ನು ತೊರೆದು UPSC ಪರೀಕ್ಷೆಯನ್ನು ಬರೆದು IFS ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಅವರ ಕಥೆ ಇದು.
ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
ರಾಜಸ್ಥಾನದಲ್ಲಿ (Rajasthan) ಜನಿಸಿದ ಐಶ್ವರ್ಯಾ ಶೆಯೋರಾನ್ ಅವರ ತಂದೆ commanding officer ಅಜಯ್ ಕುಮಾರ್, ಕರೀಂನಗರದ 9 ನೇ ತೆಲಂಗಾಣ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.
ಐಶ್ವರ್ಯಾ ಅವರ ಪೋಷಕರು ಆಬಳಿಕ ದೆಹಲಿಗೆ ಬರುತ್ತಾರೆ. ಅಲ್ಲಿ ಐಶ್ವರ್ಯಾ ಶೆಯೋರಾನ್ ಅವರು ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಅವರು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 97.5% ಗಳಿಸುತ್ತಾರೆ. ಬಳಿಕ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ (commerce) ಪದವಿ ಸಹ ಪಡೆಯುತ್ತಾರೆ.
ಕಾಲೇಜು ದಿನಗಳಲ್ಲಿ ಐಶ್ವರ್ಯಾ ಮಾಡೆಲಿಂಗ್‌ಗೆ ಸೇರಿಕೊಂಡರು. ನಂತರ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು. 2014 ರಲ್ಲಿ ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ನಂತಹ ಪ್ರಶಸ್ತಿ ಗೆದ್ದರು. 2015 ರಲ್ಲಿ ಮಿಸ್ ದೆಹಲಿ, ಬಳಿಕ 2016 ರಲ್ಲಿ ಐಶ್ವರ್ಯಾ Miss India ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದರು.
ಇದನ್ನು ಓದಿ : Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
ಐಶ್ವರ್ಯಾ ಶೆಯೋರಾನ್ ಅವರು 2018 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದರು. ಯಾವುದೇ Training ಪಡೆಯದೇ 10 ತಿಂಗಳುಗಳ ಕಾಲ ಸ್ವಯಂ ಅಧ್ಯಯನ ನಡೆಸುತ್ತಾರೆ. ಪ್ರತಿಫಲವೆಂಬಂತೆ ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ರ‍್ಯಾಂಕ್ ಪಡೆಯುತ್ತಾರೆ.
ಪ್ರಸ್ತುತ ಐಶ್ವರ್ಯಾ ಶೆಯೋರನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (India\’s Ministry of External Affairs) ಐಎಫ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ