ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯ ರೈಲ್ವೆ ಇಲಾಖೆಯು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 14,298 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಇದನ್ನು ಓದಿ : ಈ ಊರಿನ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ; ಯಾಕೆ ಗೊತ್ತೇ.?
ಹುದ್ದೆಗಳ ವಿವರ :
* ಟೆಕ್ನಿಷಿಯನ್ ಗ್ರೇಡ್ III (ಓಪನ್ ಲೈನ್) 8,052 ಹುದ್ದೆ,
ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ ತೇರ್ಗಡೆ
* ಟೆಕ್ನಿಷಿಯನ್ ಗ್ರೇಡ್ III (ವರ್ಕ್ ಶಾಪ್ & ಪಿಯುಗಳು) 5,154 ಹುದ್ದೆ, ವಿದ್ಯಾರ್ಹತೆ : 10, 12ನೇ ತರಗತಿ, ಐಟಿಐ ತೇರ್ಗಡೆ.
* ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ (ಓಪನ್ ಲೈನ್) – 1,092 ಹುದ್ದೆ,
ವಿದ್ಯಾರ್ಹತೆ : ಬಿ.ಎಸ್‌ಸಿ, ಬಿಇ/ಬಿ.ಟೆಕ್
ವಯೋಮಿತಿ :
ಟೆಕ್ನಿಷಿಯನ್ III ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 18 ವರ್ಷ, ಗರಿಷ್ಠ ವಯಸ್ಸು 33 ವರ್ಷ.
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 36 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ :
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ : 5 ವರ್ಷ
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ : 3 ವರ್ಷ
ಆಯ್ಕೆ ವಿಧಾನ :
* ಕಂಪ್ಯೂಟರ್ ಆಧಾರಿತ ಟೆಸ್ಟ್
* ದಾಖಲಾತಿ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
ಇದನ್ನು ಓದಿ : Health : ಹೃದಯಾಘಾತ ನಿಮ್ಮ ಬಳಿ ಸುಳಿಯಬಾರದೆಂದರೆ ತಪ್ಪದೇ ಈ 5 ಕೆಲಸಗಳನ್ನು ಮಾಡಿ.
ಅರ್ಜಿ ಶುಲ್ಕ :
* ಎಸ್‌ಸಿ/ ಎಸ್‌ಟಿ/ ಮಾಜಿ ಯೋಧರು/ ಪಿಡಬ್ಲ್ಯುಬಿಡಿ/ಮಹಿಳೆಯರು /ತೃತೀಯ ಲಿಂಗಿಗಳು/ ಇಬಿಎಸ್ ಅಭ್ಯರ್ಥಿಗಳು : 250. * ಇತರ ಅಭ್ಯರ್ಥಿಗಳು : 500 ರೂ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ : ಅಕ್ಟೋಬರ್ 2
ಕೊನೆಯ ದಿನ : ಅಕ್ಟೋಬರ್ 16. ಉದ್ಯೋಗ ಸ್ಥಳ : ಭಾರತದಾದ್ಯಂತ
ವೆಬ್‌ಸೈಟ್ ವಿಳಾಸ : https://www.rrbbnc.gov.in/