ಜನಸ್ಪಂದನ ನ್ಯೂಸ್, ಡೆಸ್ಕ್ : ದೈತ್ಯಾಕಾರದ ಹದ್ದೊಂದು ಪುಟ್ಟ ಮಗುವನ್ನು ಹಿಡಿಯಲು ಬಂದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!
ಎಕ್ಸ್ ನಲ್ಲಿ ಹರಿದಾಡುತ್ತಿರುವ ಈ ವೈರಲ್ ವಿಡಿಯೋ ಎಲ್ಲರನ್ನು ದಿಗ್ಭ್ರಮೆಗೊಳಿಸುವಂತಿದೆ. ಹದ್ದು ನದಿಯೊಂದರ ಬಳಿ ಆಟವಾಡುತ್ತಾ ನಿಂತಿದ್ದ ಮಗುವನ್ನು ಹಿಡಿಯಲು ಪ್ರಯತ್ನಿಸುವ ಆಘಾತಕಾರಿ ದೃಶ್ಯವೊಂದು ಸೆರೆಯಾಗಿದೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವಿಡಿಯೋದಲ್ಲಿ ಸಣ್ಣ ಮಗುವೊಂದು ನೀರಿನ ಬಳಿ ನಿಂತಿರುವುದನ್ನು ನೋಡಬಹುದು. ಏಕಾಏಕಿ ಮೇಲೆ ಹಾರಾಡುತ್ತಿರುವ ಹದ್ದು ಮಗುವನ್ನು ತಿನ್ನಲು ಹೊಂಚು ಹಾಕಿ ವೇಗವಾಗಿ ಕೆಳಗೆ ಮಗುವನ್ನು ಹಿಡಿಯಲು ಪ್ರಯತ್ನಿಸಿದೆ.
ಅದೃಷ್ಟವಶಾತ್, ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬರು ಆಗಬಹುದಾದ ಅಪಾಯವನ್ನು ತಪ್ಪಿಸಿದ್ದು, ವೇಗವಾಗಿ ಸಮಯಕ್ಕೆ ಸರಿಯಾಗಿ ಮಗುವನ್ನು ಹಿಡಿದು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.
ಇದನ್ನು ಓದಿ : ತುಂಬಿ ಹರಿಯುವ ನದಿಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ; ವಿಡಿಯೋ Viral.!
ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಇದನ್ನು ಎಡಿಟ್ ಮಾಡಲಾಗಿದೆ ಎಂದು ಕೆಲವು ವೀಕ್ಷಕರು ಊಹಿಸಿದ್ದಾರೆ. ಈ ದೃಶ್ಯ ಕಂಡು ಅನೇಕರು ಆಘಾತಗೊಂಡಿದ್ದಾರೆ.
बाज बच्चे को लेकर उड़ने ही वाला था कि अचानक…#EagleAttack pic.twitter.com/RglxIGYbe2
— Inderjeet Barak🌾 (@inderjeetbarak) May 27, 2024