ಜನಸ್ಪಂದನ ನ್ಯೂಸ್, ಬೆಂಗಳೂರು : ಮಹಿಳಾ ಪೇದೆಯೊಬ್ಬರು ಕೋಚಿಂಗ್ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನು ಓದಿ : 10ನೇ ತರಗತಿ ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ Railway ಇಲಾಖೆಯಲ್ಲಿ ಉದ್ಯೋಗಾವಕಾಶ.!
ಇಂದೋರ್ ಮೂಲದ ತರಬೇತಿ ಸಂಸ್ಥೆಯು ಪೊಲೀಸ್ ಇಲಾಖೆಯ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದು, ಸಂಸ್ಥೆಯ ಪರವಾಗಿ ಮಹಿಳಾ ಪೇದೆಯು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಈ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಮಹಿಳಾ ಪೇದೆ ಅಮಾನತಾಗಿದ್ದಾರೆ.
ಖಾಸಗಿ ತರಬೇತಿ ಸಂಸ್ಥೆಯ ಪರವಾಗಿ ಸಮವಸ್ತ್ರ ಧರಿಸಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಪ್ರಚಾರ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳಿಂದ ತಿಳಿದು ಬಂದಿದೆ. ಸದರಿ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಇಲಾಖೆ ತನಿಖೆ ಪ್ರಗತಿಯಲ್ಲಿದೆ ಎಂದು ರತ್ಲಮ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಲೋಧಾ ಹೇಳಿದ್ದಾರೆ.
ಇದನ್ನು ಓದಿ : ಜಪ್ತಿ ಮಾಡಿದ್ದ ಹಣ ದುರ್ಬಳಕೆ ಮಾಡಿಕೊಂಡು ನಾಪತ್ತೆಯಾದ Police ಇನ್ಸ್‌ಪೆಕ್ಟರ್.!
ವೈರಲ್ ಆದ ಜಾಹೀರಾತು ವಿಡಿಯೋದಲ್ಲಿ, ಸಂಚಾರಿ ಕರ್ತವ್ಯದಲ್ಲಿರುವ ಪೊಲೀಸ್ ಪೇದೆಯನ್ನು ಭೇಟಿಯಾಗುವ ಯುವತಿಯು, ಹೆಲೋ ಮೇಡಂ, ನಾನು ಹಲವಾರು ದಿನಗಳಿಂದ ನಿಮ್ಮನ್ನು ಅನುಸರಿಸುತ್ತಿದ್ದೇನೆ. ನನಗೂ ನಿಮ್ಮಂತೆಯೇ ಆಗಬೇಕು. ನಾನು ಪೊಲೀಸಾಗಲು ಎಲ್ಲಿ ಸಿದ್ಧತೆ ನಡೆಸಬೇಕು? ಎಂದು ಪ್ರಶ್ನಿಸುತ್ತಾಳೆ.
ಅದಕ್ಕೆ ಪ್ರತಿಯಾಗಿ, ಇಂದೋರ್ ಮೂಲದ ತರಬೇತಿ ಸಂಸ್ಥೆಯೊಂದರ ಹೆಸರನ್ನು ಹೇಳುವ ಆ ಪೊಲೀಸ್ ಪೇದೆ, ನಾನು ಮಧ್ಯಪ್ರದೇಶ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಗಾಗಿ ಆ ಸಂಸ್ಥೆಯಲ್ಲೇ ಸಿದ್ಧತೆ ನಡೆಸುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ಇದಲ್ಲದೆ, ಆ ಸಂಸ್ಥೆಯ ಯೂಟ್ಯೂಬ್ ವಾಹಿನಿಯನ್ನೂ ಪರಿಶೀಲಿಸುವಂತೆ ಸಲಹೆ ನೀಡುವ ಆ ಮಹಿಳಾ ಪೇದೆಯು, ಆ ಸಂಸ್ಥೆಯು ಮಧ್ಯಪ್ರದೇಶ ಸಿಬ್ಬಂದಿ ಆಯ್ಕೆ ಮಂಡಳಿ ಪರೀಕ್ಷಾ ಸಿದ್ಧತೆಗೂ ತರಬೇತಿ ನೀಡುತ್ತದೆ ಎಂದೂ ಸಲಹೆ ನೀಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
मध्य प्रदेश पुलिस एक्ट की धारा 3 (1) (क) के अंतर्गत पुलिस वाले खाकी वर्दी पहन कर ड्यूटी करते वक्त कोचिंगों का प्रचार प्रसार कर सकते है। pic.twitter.com/1U4HRtkm91
— खुरपेंच (@khurpenchh) August 16, 2024