ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಹೀರೋಯಿನ್ ಊರ್ವಶಿ ರೌಟೇಲಾ ಅವರ ಬಾತ್ ರೂಂ ವಿಡಿಯೋ ಲೀಕ್ ಆಗಿ ಸಂಚಲನ ಮೂಡಿಸಿತ್ತು. ಊರ್ವಶಿ ರೌಟೇಲಾ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ಲೀಕ್ ಆಗಿತ್ತು.
ಇದನ್ನು ಓದಿ : Health : ಬೆಳಿಗ್ಗೆ ತುಟಿ ಬಣ್ಣ ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಊರ್ವಶಿ ರೌಟೇಲಾ, ವಿಡಿಯೋ ನನ್ನದು ಆದರೆ ನನ್ನ ಅನುಮತಿ ಇಲ್ಲದೇ ಲೀಕ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಕನ್ನಡದ ಜನಪ್ರಿಯ ಅರ್ಜುನ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ ಮೀರಾ ಚೋಪ್ರಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಟಿಯ ಕೆಲ ಖಾಸಗಿ ವಿಡಿಯೋಗಳು ಹರಿದಾಡತೊಡಗಿದೆ.
ಸದ್ಯ ಹಿಂದಿ, ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಜನಪ್ರಿಯ ತಾರೆಯಾಗಿರುವ ಮೀರಾ ಚೋಪ್ರಾ ವಿವಾದಕ್ಕೆ ಸಿಲುಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಖಾಸಗಿ ವಿಡಿಯೋಗಳು ಲೀಕ್ ಆಗಿವೆ.
ಇದನ್ನು ಓದಿ : ಇಂದಿನಿಂದ FASTag ನಿಯಮದಲ್ಲಿ ಬದಲಾವಣೆ ; ಹಳೆ ಫಾಸ್ಟ್ ಟ್ಯಾಗ್ ಹೊಂದಿದವರು ಹೀಗೆ ಮಾಡಿ.!
ಆದರೆ ಈ ವಿಡಿಯೋದಲ್ಲಿ ಮೀರಾ ಚೋಪ್ರಾ ಇದ್ದಾರಾ? ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಇದನ್ನು ಎಡಿಟ್ ಮಾಡಿ ಲೀಕ್ ಮಾಡಿದ್ದಾರಾ? ಎಂಬ ಅನುಮಾನಗಳು ಮೂಡಿವೆ.
ಈ ಕುರಿತು ನಟಿ ಮೀರಾ, ಇದು ನಕಲಿ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ. ಅದು ನಕಲಿ ವಿಡಿಯೋ. ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿ ಹರಿಬಿಡಲಾಗಿದೆ ಎಂದಿದ್ದಾರೆ.
ಇಷ್ಟೇ ಅಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಡಿಯೋ ಕ್ರಿಯೆಟ್ ಮಾಡಿ ಹರಿಬಿಟ್ಟ ಆರೋಪಿ ಹಾಗೂ ಈ ವಿಡಿಯೋವನ್ನು ಶೇರ್ ಮಾಡಿದವರ ವಿರುದ್ಧವೂ ದೂರು ದಾಖಲಿಸಲು ಮೀರಾ ಚೋಪ್ರಾ ಆಗ್ರಹಿಸಿದ್ದಾರೆ.
ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವಿಡಿಯೋ ಸೃಷ್ಟಿ ಮಾಡಿದ್ದು ಯಾರು? ಆತನ ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು. ಇಷ್ಟೇ ಅಲ್ಲ ಈ ನಕಲಿ ವಿಡಿಯೋವನ್ನು ಯಾರೆಲ್ಲಾ ಹಂಚಿಕೊಂಡಿದ್ದಾರೆ, ಫಾರ್ವರ್ಡ್ ಮಾಡಿದ್ದಾರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ. ಇದೀಗ ಸೈಬರ್ ದಳ ಈ ಪ್ರಕರಣ ಕುರಿತು ಕಾರ್ಯ ನಿರ್ವಹಿಸುತ್ತಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಿಂದ ನಿರ್ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.