ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬರು ಅತ್ಯಾಚಾರ ಆರೋಪದಿಂದ ಖುಲಾಸೆಗೊಂಡಿದ್ದು, ಅವರ ವಿರುದ್ಧ ಅವರ 15 ವರ್ಷದ ಅಪ್ರಾಪ್ತ ಪುತ್ರಿಯೇ ಸುಳ್ಳು ಅತ್ಯಾಚಾರ ಆರೋಪ ಹೊರಿಸಿರುವುದು ಬೆಳಕಿಗೆ ಬಂದಿದೆ.
ಇನ್ನೂ ಡೆಹ್ರಾಡೂನ್ ನ ವಿಶೇಷ ಪೋಕ್ಸೊ ನ್ಯಾಯಾಲಯವು 42 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಜೈಲಿನಲ್ಲಿ 5 ವರ್ಷಗಳನ್ನು ಕಳೆದ ನಂತರ ಅವರು ಬಿಡುಗಡೆಯಾಗಿದ್ದಾರೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ಅವರ ಪುತ್ರಿಯು ತನ್ನ ಗೆಳೆಯನ ಜೊತೆ ಕಾಲ ಕಳೆಯುವ ಸಲುವಾಗಿ ತರಗತಿಗೆ ಹೋಗುತ್ತಿರಲಿಲ್ಲ. ಈ ವಿಚಾರವನ್ನು ತಿಳಿದು ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರ ವಿರುದ್ಧ ಅತ್ಯಾಚಾರ ಆರೋಪವನ್ನು ಹೊರಿಸಿದ್ದಳು ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
15 ವರ್ಷದ ಬಾಲಕಿಯೇ ತನ್ನ 42 ವರ್ಷದ ತಂದೆಯ ವಿರುದ್ಧ 2019ರ ಡಿಸೆಂಬರ್ 25 ರಂದು ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಬಾಲಕಿಯ ಹೇಳಿಕೆ ಆಧರಿಸಿ ಮಕ್ಕಳ ಕಲ್ಯಾಣ ಸಮಿತಿಯು ತಂದೆಯ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿತ್ತು.
ಇದನ್ನು ಓದಿ : ಮಹಿಳೆಯ ವಿರುದ್ಧವೂ POCSO ಕೇಸ್ ದಾಖಲಿಸಬಹುದು: ಹೈಕೋರ್ಟ್.!
ತನ್ನ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಳು. ಅಲ್ಲದೇ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಆಕೆಯ ಕಿರಿಯ ಸಹೋದರಿಯೂ ತನ್ನ ಅಕ್ಕನನ್ನು ಬೆಂಬಲಿಸಿದ್ದಳು ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಡಿಸೆಂಬರ್ 27ರಂದು ಬಾಲಕಿಯ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಹೀಗೆ ವ್ಯಕ್ತಿಯು ಸುಳ್ಳು ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದ. ಇದಾದ ನಂತರ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಲವ್ ಲೆಟರ್ ಒಂದು ಸಿಕ್ಕಿತ್ತು. ಇದನ್ನು ಬಾಲಕಿಗೆ ಆತನ ಗೆಳೆಯ ಬರೆದಿದ್ದ. ಇದಾದ ನಂತರ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ತಂದೆ ತಾನು ಶಾಲೆಗೆ ಗೈರಾಗುತ್ತಿದ್ದಿದ್ದಕ್ಕೆ, ತರಗತಿ ಮಿಸ್ ಮಾಡುತ್ತಿದ್ದಿದ್ದಕ್ಕೆ, ಹುಡುಗನೋರ್ವನ ಸ್ನೇಹ ಮಾಡಿದ್ದಕ್ಕೆ ಬೈಯುತ್ತಿದ್ದರು ಎಂಬುದನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಳು.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
ಇದಾದ ನಂತರ ಬಾಲಕಿಗೆ ತಿರುವು ಮುರುವಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸಾಕ್ಷ್ಯಗಳ ಪರಿಶೀಲನೆ ಹಾಗೂ ವಿಚಾರಣೆ ಮಾಡಿದಾಗ ಬಾಲಕಿ ತನ್ನ ಗೆಳೆಯನ ಮಾತು ಕೇಳಿ ಅಪ್ಪನ ವಿರುದ್ಧ ಸುಳ್ಳು ರೇಪ್ ಕತೆ ಕಟ್ಟಿ ಹಾಕಿ ಅಪ್ಪನನ್ನು ಜೈಲಿಗೆ ಕಳುಹಿಸಿದಳು ಎಂಬುದು ಸಾಬೀತಾಗಿತ್ತು.
ಅಲ್ಲದೇ ಅತ್ಯಾಚಾರ ಪ್ರಕರಣದ ವೈದ್ಯಕೀಯ ವರದಿ ಕೂಡ ನೆಗೆಟಿವ್ ಆಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ POCSO ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣವನ್ನು ರದ್ದುಪಡಿಸಿ ಈಗಾಗಲೇ ಐದು ವರ್ಷ ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ವ್ಯಕ್ತಿಯನ್ನು ನಿರಾಪರಾಧಿ ಎಂದು ಹೇಳಿ ಬಿಡುಗಡೆಗೆ ಆದೇಶಿಸಿದ್ದಾರೆ.
ಒಟ್ಟಿನಲ್ಲಿ ಮಗಳ ಈ ಭಯಾನಕ ಆರೋಪದಿಂದಾಗಿ ತಂದೆ ಏನು ಮಾಡದ ತಪ್ಪಿಗೆ ಐದು ವರ್ಷಗಳ ಕಾಲ ಕಂಬಿ ಹಿಂದೆ ಕಳೆಯುವಂತಾಗಿದ್ದು, ನಿಜಕ್ಕೂ ದುರಾದೃಷ್ಟವೇ ಸರಿ.