ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಂಡತಿಯ ಸಾವು, ದೂರಾದ ಮಕ್ಕಳಿಂದ ಒಂಟಿತನ ಅನುಭವಿಸಿ ಮಾಜಿ ಐಪಿಎಸ್ ಅಧಿಕಾರಿ 81ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿ ಸದ್ಯ ಸುದ್ದಿಯಲ್ಲಿದ್ದಾರೆ.
ಲಖನೌದ ಇಂದಿರಾನಗರ ನಿವಾಸಿ ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರು ತಮ್ಮ 81ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!
ಆಗಸ್ಟ್ 8ರಂದು ಲಂಖೀಪುರದ ಅಂಗನವಾಡಿ ಕಾರ್ಯಕರ್ತೆ ಜೊತೆಗೆ ಅವರು ಎರಡನೇ ಬಾರಿಗೆ ಹಸೆಮಣೆ ಏರಿದ್ದಾರೆ.
2022ರಲ್ಲಿ ದಾರಾಪುರಿ ಅವರ ಮೊದಲ ಹೆಂಡತಿ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದರು.
ಇವರ ಇಬ್ಬರು ಗಂಡು ಮಕ್ಕಳಾದ ವೈದ್ ಮತ್ತು ರಾಹುಲ್ ತಂದೆಯಿಂದ ದೂರವಿದ್ದರೆ, ಮಗಳು ಸುಲೋಚನಾ ಗಂಡನ ಮನೆಯಲ್ಲಿ ನೆಲೆಸಿದ್ದಾರೆ.
ಹೆಂಡತಿಯ ಅಗಲಿಕೆ ಜೊತೆಗೆ ಮಕ್ಕಳು ಜೊತೆಯಲ್ಲಿ ಇರದೇ ಇರುವುದು ದಾರಾಪುರಿಯವರಲ್ಲಿ ಒಂಟಿತನ ಕಾಡುವಂತೆ ಮಾಡಿತ್ತು. ಹೀಗಾಗಿ ಅವರು ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದರು.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರ ಬಗ್ಗೆ ಚರ್ಚೆ ಮಾಡಿದ್ದಾರೆ, ಈ ವೇಳೆ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ದಾರಾಪುರಿ ಯವರು ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಎರಡನೇ ವಿವಾಹವಾದರು.